alex Certify ಪಿಎಂ ಕೇರ್ಸ್‌ ಗೆ 2.5 ಲಕ್ಷ ದೇಣಿಗೆ ಕೊಟ್ಟವರ ತಾಯಿಗೆ ಆಸ್ಪತ್ರೆಯಲ್ಲಿ ಸಿಗಲಿಲ್ಲ ಹಾಸಿಗೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಿಎಂ ಕೇರ್ಸ್‌ ಗೆ 2.5 ಲಕ್ಷ ದೇಣಿಗೆ ಕೊಟ್ಟವರ ತಾಯಿಗೆ ಆಸ್ಪತ್ರೆಯಲ್ಲಿ ಸಿಗಲಿಲ್ಲ ಹಾಸಿಗೆ….!

ಕೋವಿಡ್ ಎರಡನೇ ಅಲೆಗೆ ದೇಶವೇ ತತ್ತರಿಸಿ ಹೋಗಿದೆ ಎನ್ನುವಷ್ಟರ ಮಟ್ಟಿಗೆ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಕೊರತೆಯ ಸುದ್ದಿಗಳು ತೇಲಿ ಬರುತ್ತಲೇ ಇವೆ.

ಒಮ್ಮೆಲೇ ಈ ಜಾಗತಿಕ ಸೋಂಕಿನ ಅಬ್ಬರ ದೇಶದಲ್ಲೆಲ್ಲಾ ವ್ಯಾಪಿಸಿದ ಕಾರಣ ಲಭ್ಯವಿರುವ ವೈದ್ಯಕೀಯ ಸವಲತ್ತುಗಳ ಮೇಲೆ ಮಿತಿಮೀರಿದ ಒತ್ತಡ ಬಿದ್ದು ಎಲ್ಲೆಡೆ ಹಾಹಾಕಾರ ಸೃಷ್ಟಿಯಾಗಿದೆ.

ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್: BPL ಕಾರ್ಡ್ ಗೆ ಅರ್ಜಿ ಸಲ್ಲಿಸಿದವರಿಗೂ ರೇಷನ್ ವಿತರಣೆ

ಟ್ವಿಟರ್‌ ಬಳಕೆದಾರ ವಿಜಯ್‌ ಪರೀಖ್ ಅವರು ಇಂಥದ್ದೇ ಸನ್ನಿವೇಶದಲ್ಲಿ ತಮಗೆ ಉಂಟಾದ ಹೃದಯವಿದ್ರಾವಕ ಅನುಭವದ ಕುರಿತು ಹಂಚಿಕೊಂಡಿದ್ದಾರೆ.

ಕೋವಿಡ್ ವಿರುದ್ಧದ ದೇಶದ ಹೋರಾಟಕ್ಕೆ ತಮ್ಮ ಕಾಣಿಕೆಯಾಗಿ ಪಿಎಂ ಕೇರ‍್ಸ್‌ಗೆ 2.5 ಲಕ್ಷ ರೂ.ಗಳ ದೇಣಿಗೆ ಕೊಟ್ಟ ವಿಜಯ್ ಪರೀಖ್‌ಗೆ ಖುದ್ದು ತಮ್ಮ ತಾಯಿಗೆ ಕೋವಿಡ್ ಸೋಂಕು ತಗುಲಿದ ಘಳಿಗೆ ಆಸ್ಪತ್ರೆಯಲ್ಲಿ ಹಾಸಿಗೆ ಸಿಗದೇ ಪರದಾಡಿದ್ದಾರೆ. ಸಾವು – ಬದುಕಿನ ನಡುವೆ ಒದ್ದಾಡುತ್ತಿರುವ ತಮ್ಮ ತಾಯಿಗೆ ಒಂದು ಹಾಸಿಗೆ ಕಂಡುಕೊಳ್ಳಲು ಆಗದ ತಮ್ಮ ನೋವನ್ನು ತೋಡಿಕೊಂಡು ಮಾಡಿರುವ ಪೋಸ್ಟ್‌ಗೆ ಪ್ರಧಾನ ಮಂತ್ರಿ ಕಾರ್ಯಾಲಯ, ರಾಜನಾಥ್‌ ಸಿಂಗ್, ಆರ್‌ಎಸ್‌ಎಸ್, ಸ್ಮೃತಿ ಇರಾನಿ ಹಾಗೂ ರಾಷ್ಟ್ರಪತಿ ಭವನಗಳನ್ನು ಟ್ಯಾಗ್ ಮಾಡಿದ್ದಾರೆ.

ವಿಮಾನದಲ್ಲಿ ಮೈಮರೆತ ದಂಪತಿಗೆ ಗಗನಸಖಿ ಮಾಡಿದ್ದೇನು…..?

ಒಂದು ವೇಳೆ ಮೂರನೇ ಅಲೆ ಬಂದಲ್ಲಿ ನನ್ನ ಕುಟುಂಬದ ಇನ್ನಷ್ಟು ಸದಸ್ಯರನ್ನು ಕಳೆದುಕೊಳ್ಳದೇ ಇರಲು ಇನ್ನೆಷ್ಟು ದೇಣಿಗೆ ಕೊಡಲಿ ತಿಳಿಸಿ ಎಂದು ಮನನೊಂದುಕೊಂಡು ಬರೆದುಕೊಂಡಿದ್ದಾರೆ ವಿಜಯ್.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...