alex Certify 10 ರೂ.ಗೆ ಬಿರಿಯಾನಿ ಮಾರೋಕೆ ಹೋದವನು ಜೈಲು ಪಾಲು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

10 ರೂ.ಗೆ ಬಿರಿಯಾನಿ ಮಾರೋಕೆ ಹೋದವನು ಜೈಲು ಪಾಲು…!

10 ರೂಪಾಯಿಗೆ ಬಿರಿಯಾನಿ ಎಂಬ ಆಫರ್​ ನೀಡಿ ಬಿರಿಯಾನಿ ಮಾರಾಟ ಮಾಡ್ತಿದ್ದ ವ್ಯಕ್ತಿ ಜೈಲುಪಾಲಾದ ಘಟನೆ ತಮಿಳು ನಾಡಿನ ಅರುಪ್ಪುಕೊಟ್ಟಾಯಿಯಲ್ಲಿ ನಡೆದಿದೆ.

ಹೋಟೆಲ್​ಗೆ ಗ್ರಾಹಕರನ್ನ ಸೆಳೆಯೋಕೆ ಪ್ಲಾನ್​ ಮಾಡಿದ್ದ ಮಾಲೀಕ ಝಾಹೀರ್​ ಹುಸೇನ್​ 10 ರೂಪಾಯಿಗೆ ಬಿರಿಯಾನಿ ನೀಡೋದಾಗಿ ಜಾಹೀರಾತು ನೀಡಿದ್ದಾನೆ. ಅಲ್ಲದೇ ಈ ಆಫರ್​ ಕೇವಲ ಬೆಳಗ್ಗೆ 11ರಿಂದ 1 ಗಂಟೆಯವರೆಗೆ ಮಾತ್ರ ಅಂತಾ ಬೇರೆ ಹೇಳಿದ್ದಾನೆ, ಇದನ್ನ ನೋಡಿದ ಬಿರಿಯಾನಿ ಪ್ರಿಯರು ಹೋಟೆಲ್​ ಮುಂದೆ ಜಮಾಯಿಸಿಬಿಟ್ಟಿದ್ದಾರೆ.

ಕರೊನಾ ಸಮಯದಲ್ಲೂ ಸಾಮಾಜಿಕ ಅಂತರ ಕಾಪಾಡದೇ ಗ್ರಾಹಕರು ನಿಂತಿದ್ದನ್ನ ಕಂಡ ಪೊಲೀಸರು ಹೋಟೆಲ್​ ಮಾಲೀಕನ್ನ ಬಂಧಿಸಿದ್ದಾರೆ.

ಗ್ರಾಹಕರಿಗೆ ನೀಡಲಿಕ್ಕೋಸ್ಕರ ಝಾಹೀರ್​ ಹುಸೇನ್​ 2500 ಬಿರಿಯಾನಿ ಪ್ಯಾಕೇಟ್​ ರೆಡಿ ಮಾಡಿದ್ದ. ಆದರೆ ಅರ್ಧದಷ್ಟು ಬಿರಿಯಾನಿ ಖಾಲಿಯಾಗೋದ್ರೊಳಗೆ ಹುಸೇನ್​ನನ್ನ ಪೊಲೀಸರು ಬಂಧಿಸಿದ್ದಾರೆ. ಅಂಗಡಿ ಮುಂದೆ ನೆರೆದಿದ್ದ ಜನರಿಂದ ಟ್ರಾಫಿಕ್​ ಜಾಮ್​ ಬೇರೆ ಉಂಟಾಗಿದ್ದು ಜನರನ್ನ ಚದುರಿಸೋಕೆ ಪೊಲೀಸರು ಹರಸಾಹಸ ಪಡುವಂತಾಯ್ತು. ಇನ್ನು ಈ ಬಿರಿಯಾನಿ ಪ್ಯಾಕೇಟ್​ಗಳನ್ನ ಹಸಿವಿನಿಂದ ಬಳಲುತ್ತಿದ್ದವರಿಗೆ ನೀಡಿದ್ದಾರೆ ಎನ್ನಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...