ಡಾ. ಎಪಿಜೆ ಅಬ್ದುಲ್ ಕಲಾಂರ ಪ್ರತಿಮೆಯನ್ನ ಸ್ವಚ್ಛ ಮಾಡಿಯೇ ಜನಪ್ರಿಯತೆ ಗಳಿಸಿದ್ದ ಕೇರಳದ ಅನಾಥ ವ್ಯಕ್ತಿಯ ಶವ ನಿಗೂಢವಾಗಿ ಪತ್ತೆಯಾಗಿದೆ.
ಶಿವದಾಸನ್ ಎಂದು ಗುರುತಿಸಲ್ಪಟ್ಟ ವ್ಯಕ್ತಿ ಕೊಚ್ಚಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಇದೇ ಬೀದಿಯಲ್ಲಿ ವಾಸಿಸುತ್ತಿದ್ದ ಅವರು ಕಲಾಂರ ಪ್ರತಿಮೆಯನ್ನ ಸ್ವಚ್ಛ ಮಾಡಿ ಪುಷ್ಪಗಳಿಂದ ಅಲಂಕಾರ ಮಾಡಿದ್ದರು.
63 ವರ್ಷದ ಶಿವದಾಸನ್ ನೈಸರ್ಗಿಕವಾಗಿಯೇ ಸಾವನ್ನಪ್ಪಿದ್ದಾರೆ ಎಂದು ಮೊದಲು ಭಾವಿಸಲಾಗಿತ್ತು. ಆದರೆ ಅವರ ದೇಹದ ಮೇಲಿನ ಗಾಯದ ಗುರುತುಗಳನ್ನ ನೋಡ್ತಿದ್ದರೆ ಶಿವದಾಸನ್ ಜನಪ್ರಿಯತೆ ಸಹಿಸದ ಯಾರೋ ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.