
ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ರೀತಿಯದ್ದೇ ಫೋಟೋ ಒಂದು ವೈರಲ್ ಆಗ್ತಿದೆ. ಫೋಟೋದಲ್ಲಿ ವರ ಮದುವೆಯ ಪೋಷಾಕನ್ನೇ ತೊಟ್ಟು ಕಂಪ್ಯೂಟರ್ ಮುಂದೆ ಕೂತಿದ್ದರೆ, ನವವಿವಾಹಿತೆ ಮದುವೆ ಧಿರಿಸಿನಲ್ಲಿ ಆತನ ಹಿಂದಿರುವ ಹಾಸಿಗೆಯ ಮೇಲೆ ಕುಳಿತಿದ್ದಾಳೆ.
ಮೊದಲ ರಾತ್ರಿಯ ದಿನದಂದು ಈ ರೀತಿ ಪತಿ ಕಂಪ್ಯೂಟರ್ ಮುಂದೆ ಹಾಗೂ ಪತ್ನಿ ಹಾಸಿಗೆ ಮೇಲೆ ಕುಳಿತಿರುವ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಏಕಾಏಕಿ ಹಿಟ್ ಆಗಿದೆ. ಟ್ವಿಟರ್ನಲ್ಲಿ ಈ ಫೋಟೋ ಮೊದಲು ಶೇರ್ ಮಾಡಲಾಗಿದ್ದು ಹೋಲ್ಡ್ ಆನ್ ಬೇಬಿ ಎಂದು ಶೀರ್ಷಿಕೆ ನೀಡಲಾಗಿದೆ. ಈ ಫೋಟೊ ಕಂಡ ನೆಟ್ಟಿಗರು ತರಹೇವಾರಿ ಕಮೆಂಟ್ ಮಾಡಿದ್ದಾರೆ.
https://twitter.com/ghammmhours/status/1359197691905859587