alex Certify ಆಂಟಿಯೊಂದಿಗೆ ಸಂಬಂಧ ಬೆಳೆಸಿದ ಯುವಕ: ದುಡುಕಿದ ಜೋಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಂಟಿಯೊಂದಿಗೆ ಸಂಬಂಧ ಬೆಳೆಸಿದ ಯುವಕ: ದುಡುಕಿದ ಜೋಡಿ

ಹರಿಯಾಣದ ಸಿರ್ಸಾದ ಡಬ್ವಾಲಿ ಗೋಡಿಕನ್ ಗ್ರಾಮದಲ್ಲಿ ಮಹಿಳೆ ಮತ್ತು ಯುವಕ ಮನೆಯಲ್ಲೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

23 ವರ್ಷದ ಸಂದೀಪ್ ಮತ್ತು 43 ವರ್ಷದ ಮಹಿಳೆ ಸಂತೋಷಿ ಎರಡು ತಿಂಗಳಿನಿಂದ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿ ಇದ್ದರು. ಪಂಜಾಬ್ ಮೂಲದ ಮಹಿಳೆ ಗೋಡಿಕಾನ್ ಗ್ರಾಮದ ಸಂದೀಪ್ ಜೊತೆಗೆ ಸಂಬಂಧ ಬೆಳೆಸಿದ್ದು ಒಂದೇ ಮನೆಯಲ್ಲಿ ವಾಸವಾಗಿದ್ದರು.

ನಾಲ್ಕು ಮಕ್ಕಳ ತಾಯಿಯಾಗಿರುವ ಮಹಿಳೆಯ ಗ್ರಾಮದಲ್ಲಿ ಸಂದೀಪ್ ಚಿಕ್ಕಮ್ಮ ವಾಸವಾಗಿದ್ದು, ಅಲ್ಲಿಗೆ ಹೋಗಿಬರುತ್ತಿದ್ದ ಸಂದೀಪ್ ಮಹಿಳೆ ಜೊತೆಗೆ ಸಂಬಂಧ ಬೆಳೆಸಿ ಪರಾರಿಯಾಗಿದ್ದಾನೆ. ಲಿವ್ ಇನ್ ರಿಲೇಷನ್ ಶಿಪ್ ನಲ್ಲಿದ್ದ ಇವರು ಕೆಲ ಸಮಯದ ನಂತರ ಊರಿಗೆ ಮರಳಿದ್ದರು.

ಇದರಿಂದಾಗಿ ಸಂದೀಪ್ ಕುಟುಂಬದವರು ಅವರನ್ನು ದೂರವಿಟ್ಟಿದ್ದು, ನಂತರದಲ್ಲಿ ಗ್ರಾಮದ ಸರಪಂಚನನ್ನು ಸಂಪರ್ಕಿಸಿದ್ದಾರೆ, ಮಂಗಳವಾರ ರಾತ್ರಿ ಸಂದೀಪ್ ಮನೆಯಲ್ಲೇ ಮಹಿಳೆಯೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಂದೀಪನ ತಾಯಿ ಹೊರಗಿನಿಂದ ಕೂಗಿ ಕರೆದರು ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ಇಣುಕಿ ನೋಡಿದ್ದು, ಈ ವೇಳೆ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದು ಸಾವಿನ ತನಿಖೆ ಕೈಗೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...