alex Certify ʼಹಿಂದಿ ತೆರಿಯಾದು ಪೋಡಾʼ ಟೀ ಶರ್ಟ್ ಟ್ರೆಂಡ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಹಿಂದಿ ತೆರಿಯಾದು ಪೋಡಾʼ ಟೀ ಶರ್ಟ್ ಟ್ರೆಂಡ್…!

HindiTheriyathuPoda: T-shirts With Slogans Against Hindi Imposition are a Rage in Tamil Nadu

ಇತ್ತೀಚಿನ ದಿನಗಳಲ್ಲಿ ಹಿಂದಿಯನ್ನು ಬಲವಂತವಾಗಿ ಹೇರುತ್ತಿರುವ ವಿಚಾರವಾಗಿ ದಕ್ಷಿಣದ ರಾಜ್ಯಗಳಲ್ಲಿ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಈ ಪ್ರತಿರೋಧವು ಡಿಜಿಟಲ್ ರೂಪ ತಾಳಿದ್ದು, “I am Indian, I don’t speak Hindi,” (ನಾನೊಬ್ಬ ಭಾರತೀಯ, ನಾನು ಹಿಂದಿ ಮಾತನಾಡುವುದಿಲ್ಲ) ಎಂಬ ಸ್ಲೋಗನ್ ಇರುವ ಟೀ-ಶರ್ಟ್‌ಗಳು ಸದ್ದು ಮಾಡುತ್ತಿವೆ.

ತಮಿಳು ನಟ ಶಿರೀಶ್ ಸರವಣನ್ ಹಾಗೂ ಯುವ ಸಂಗೀತ ನಿರ್ದೇಶಕ ಯುವನ್ ಶಂಕರ್‌ ರಾಜಾ ಈ ಟೀ-ಶರ್ಟ್‌ಗಳನ್ನು ಹಾಕಿಕೊಂಡು, ಟ್ವೀಟರ್‌ನಲ್ಲಿ ಶೇರ್‌ ತಮ್ಮ ಚಿತ್ರವನ್ನು ಶೇರ್‌ ಮಾಡಿಕೊಂಡಿದ್ದಾರೆ.

#HindiTheriyathuPoda ಬರಹವಿರುವ ಟೀ-ಶರ್ಟ್‌ಗಳು ಎಲ್ಲೆಡೆ ಸದ್ದು ಮಾಡುತ್ತಿದ್ದು, ಟ್ವಿಟರ್‌ನಲ್ಲೂ ಸಹ ಈ ಹ್ಯಾಶ್‌ಟ್ಯಾಗ್‌ ಅಡಿ ಬಹಳಷ್ಟು ಚರ್ಚೆಗಳು ನಡೆಯುತ್ತಿವೆ. ಈ ವಿಚಾರವಾಗಿ ಸಾಕಷ್ಟು ಮೆಮೆಗಳು ಹರಿದಾಡುತ್ತಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...