
ಇತ್ತೀಚಿನ ದಿನಗಳಲ್ಲಿ ಹಿಂದಿಯನ್ನು ಬಲವಂತವಾಗಿ ಹೇರುತ್ತಿರುವ ವಿಚಾರವಾಗಿ ದಕ್ಷಿಣದ ರಾಜ್ಯಗಳಲ್ಲಿ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಈ ಪ್ರತಿರೋಧವು ಡಿಜಿಟಲ್ ರೂಪ ತಾಳಿದ್ದು, “I am Indian, I don’t speak Hindi,” (ನಾನೊಬ್ಬ ಭಾರತೀಯ, ನಾನು ಹಿಂದಿ ಮಾತನಾಡುವುದಿಲ್ಲ) ಎಂಬ ಸ್ಲೋಗನ್ ಇರುವ ಟೀ-ಶರ್ಟ್‌ಗಳು ಸದ್ದು ಮಾಡುತ್ತಿವೆ.
ತಮಿಳು ನಟ ಶಿರೀಶ್ ಸರವಣನ್ ಹಾಗೂ ಯುವ ಸಂಗೀತ ನಿರ್ದೇಶಕ ಯುವನ್ ಶಂಕರ್ ರಾಜಾ ಈ ಟೀ-ಶರ್ಟ್‌ಗಳನ್ನು ಹಾಕಿಕೊಂಡು, ಟ್ವೀಟರ್‌ನಲ್ಲಿ ಶೇರ್ ತಮ್ಮ ಚಿತ್ರವನ್ನು ಶೇರ್ ಮಾಡಿಕೊಂಡಿದ್ದಾರೆ.
#HindiTheriyathuPoda ಬರಹವಿರುವ ಟೀ-ಶರ್ಟ್‌ಗಳು ಎಲ್ಲೆಡೆ ಸದ್ದು ಮಾಡುತ್ತಿದ್ದು, ಟ್ವಿಟರ್‌ನಲ್ಲೂ ಸಹ ಈ ಹ್ಯಾಶ್‌ಟ್ಯಾಗ್ ಅಡಿ ಬಹಳಷ್ಟು ಚರ್ಚೆಗಳು ನಡೆಯುತ್ತಿವೆ. ಈ ವಿಚಾರವಾಗಿ ಸಾಕಷ್ಟು ಮೆಮೆಗಳು ಹರಿದಾಡುತ್ತಿವೆ.