
ಸಹರನ್ಪುರ ನಿವಾಸಿಗಳಿಗೆ ಹಿಮಾಲಯ ಪರ್ವತ ಶ್ರೇಣಿಯ ದರ್ಶನವಾಗಿದ್ದು ಈ ಫೊಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಸಹರನ್ಪುರದಿಂದ ಹಿಮಾಲಯ ಪರ್ವತವು 150 ಕಿಲೋಮೀಟರ್ ದೂರವಿದೆ. ತೌಕ್ತೆ ಚಂಡಮಾರುತದಿಂದಾಗಿ ಉತ್ತರ ಭಾರತದಲ್ಲಿ ಎರಡು ದಿನಗಳ ಕಾಲ ಭಾರೀ ಮಳೆಯಾಗಿದೆ. ಮುಂಜಾನೆಯೇ ಹಿಮಾಲಯದ ಈ ಸುಂದರ ದೃಶ್ಯಗಳು ಉತ್ತರ ಪ್ರದೇಶ ವ್ಯಾಪ್ತಿಯ ನಗರದಿಂದ ಕಾಣಿಸಿದೆ. ಈ ಫೋಟೋಗಳನ್ನ ಐಎಎಸ್ ಅಧಿಕಾರಿ ಡಾ. ವಿವೇಕ್ ಬ್ಯಾನರ್ಜಿ ಟ್ವೀಟ್ ಮಾಡಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡ್ತಿದೆ.
