
ಸಾಮಾನ್ಯವಾಗಿ ಪೊಲೀಸರು ಎಂದ ಕೂಡಲೇ ಅವರ ಗಂಭೀರತೆ ನೆನಪಿಗೆ ಬರುತ್ತೆ. ಆದರೆ ಕೇರಳದ ಪೊಲೀಸ್ ಅಧಿಕಾರಿಯೊಬ್ಬರು ಕರ್ತವ್ಯನಿಷ್ಠೆಯ ಜೊತೆ ಜೊತೆಗೆ ಮಾನವೀಯ ಮೌಲ್ಯ ಮೆರೆಯುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಭಾರೀ ಪ್ರಶಂಸೆಗೆ ಕಾರಣವಾಗ್ತಿದ್ದಾರೆ.
ಪೋಷಕರಿಬ್ಬರೂ ಅಪಘಾತಕ್ಕೀಡಾದ ಬಳಿಕ ಒಂಟಿಯಾಗಿದ್ದ ಹಸುಗೂಸನ್ನ ಆಸ್ಪತ್ರೆಯ ಹೊರಗಡೆ ಎತ್ತಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.
32 ಸೆಕೆಂಡ್ಗಳ ಈ ವಿಡಿಯೋವನ್ನ ಕೇರಳ ಪೊಲೀಸ್ ಇಲಾಖೆ ಫೇಸ್ಬುಕ್ನಲ್ಲಿ ಶೇರ್ ಮಾಡಿದೆ. ಕಾರು ಅಪಘಾತದಲ್ಲಿ 7 ತಿಂಗಳ ಮಗು ಪ್ರಾಣಾಪಾಯದಿಂದ ಪಾರಾಗಿದ್ರೆ ಮಗುವಿನ ಪೋಷಕರು ಹಾಗೂ ಸಂಬಂಧಿಗಳು ಗಾಯಗೊಂಡಿದ್ದಾರೆ. ಮಗುವಿನ ಹಿರಿಯ ಸಹೋದರಿ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
ಕಯಂಕುಲಮ್ದಲ್ಲಿರುವ ತಮ್ಮ ಮನೆಗೆ ಕಾರಿನಲ್ಲಿ ವಾಪಸ್ಸಾಗುತ್ತಿದ್ದ ವೇಳೆ ಮಾರ್ಗಮಧ್ಯದಲ್ಲಿ ಕಾರು ಟ್ರಕ್ಗೆ ಡಿಕ್ಕಿ ಹೊಡೆದ ಪರಿಣಾಮ ಈ ಅವಘಡ ಸಂಭವಿಸಿದೆ. ಈ ಅಪಘಾತದಲ್ಲಿ ಐವರು ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
https://www.facebook.com/keralapolice/videos/279186706905921/?t=1