ಮಮಕಾರ ಎನ್ನುವುದು ಮಕ್ಕಳಲ್ಲಿ ಸಹಜವಾಗಿಯೇ ಇರುತ್ತದೆ. ಆದನ್ನು ದೊಡ್ಡವರು ಹಂತಹಂತವಾಗಿ ಹೋಗಲಾಡಿಸಿಬಿಡುತ್ತಾರೆ ಎಂಬ ಆಪಾದನೆಗಳಲ್ಲಿ ನಿಜಾಂಶವೂ ಇದೆ ಎನ್ನಿ.
ತನ್ನ ಹೊಸ ಸಹಪಾಠಿಯೆಡೆಗೆ ಸ್ನೇಹಹಸ್ತ ಚಾಚಿದ 10 ವರ್ಷದ ಬಾಲಕನೊಬ್ಬ ನೆಟ್ಟಿಗರ ಹೃದಯ ಗೆಲ್ಲುತ್ತಿದ್ದಾನೆ. ಲಂಚ್ ಬ್ರೇಕ್ ವೇಳೆ ಒಬ್ಬನೇ ಕುಳಿತಿದ್ದ ಹೊಸ ಸಹಪಾಠಿಗೆ ಸಾಥಿಯಾದ ಈ ಪೋರನಿಗೆ ತನ್ನ ಹೊಸ ಮಿತ್ರನಿಂದ ಥ್ಯಾಂಕ್ಸ್ ನೋಟ್ ಬಂದಿದ್ದು, ಅದರ ಚಿತ್ರ ವೈರಲ್ ಆಗಿದೆ.
ಟ್ವಿಟರ್ ಬಳಕೆದಾರ ರವಿ ಕಲ್ಹೋನ್ ತಮ್ಮ ಮಗನಿಗೆ ಬಂದ ನೋಟ್‌ನ ಚಿತ್ರವನ್ನು ಶೇರ್ ಮಾಡಿದ್ದ, “ಪ್ರೌಡ್ ಡ್ಯಾಡ್ ಮೊಮೆಂಟ್ ಇದು. ಹೊಸ ಸಹಪಾಠಿ ಒಬ್ಬನೇ ಇದ್ದದ್ದನ್ನು ಕಂಡ ನನ್ನ ಮಗ ಆತನೊಂದಿಗೆ ಲಂಚ್‌ನಲ್ಲಿ ಭಾಗಿಯಾಗಲು ಮುಂದಾಗಿದ್ದಾನೆ. ದಿನದಾಂತ್ಯಕ್ಕೆ ಆತನಿಗೆ ಈ ಲವ್ಲೀ ನೋಟ್ ಸಿಕ್ಕಿದೆ” ಎಂದು ಹೇಳಿದ್ದಾರೆ.
“ನೀನು ನನ್ನೊಂದಿಗೆ ಹೊರಗಡೆ ಕುಳಿತಿದ್ದು ಬಹಳ ಖುಷಿ ಆಯಿತು. ಥ್ಯಾಂಕ್ಯೂ ಸೋ ಮಚ್. ಹೊರಗೆ ಬಿಟ್ಟಾಗ ನಾನೂ ಸಹ ನಿಮ್ಮೊಂದಿಗೆ ಬಂದು ಸೇರಿಕೊಳ್ಳಬಹುದೇ ಎಂದು ಕೇಳಲು ಇಚ್ಛಿಸುತ್ತೇನೆ” ಎಂದು ಈ ಹೊಸ ಸಹಪಾಠಿ ತನ್ನ ಮುದ್ದಾದ ಅಕ್ಷರಗಳಲ್ಲಿ ಬರೆದಿದ್ದಾನೆ.