ಕೋವಿಡ್-19 ಸಾಂಕ್ರಮಿಕದ ವಿರುದ್ಧ ಮುಂಚೂಣಿ ಹೋರಾಟದಲ್ಲಿರುವ ಆರೋಗ್ಯ ಸೇವಾ ಕಾರ್ಯಕರ್ತರು ಸೋಂಕಿಗೆ ತುತ್ತಾಗುವ ಸಾಧ್ಯತೆ ಸಾಮಾನ್ಯ ಜನರಿಗಿಂತ ಮೂರು ಪಟ್ಟು ಇರಲಿದೆ ಎಂದು ಅಧ್ಯಯನವೊಂದು ತಿಳಿಸಿದೆ.
ಸೋಂಕಿಗೆ ತುತ್ತಾದ ಪ್ರತಿ ಐದು ಆರೋಗ್ಯ ಕಾರ್ಯಕರ್ತರ ಪೈಕಿ ಒಬ್ಬರಲ್ಲಿ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತಿಲ್ಲ ಎಂದು ಇಆರ್‌ಜೆ ಮುಕ್ತ ಸಂಶೋಧನೆಯ ವರದಿ ತಿಳಿಸಿದೆ. 2020ರ ಮೆ-ಸೆಪ್ಟೆಂಬರ್ ಅವಧಿಯಲ್ಲಿ ಕೋವಿಡ್-19 ವಿರುದ್ಧ ರೋಗ ನಿರೋಧಕ ಶಕ್ತಿಯ ಪರೀಕ್ಷೆಗೆ ಒಳಗಾದ ಆರೋಗ್ಯ ಸೇವಾ ಸಿಬ್ಬಂದಿ ಪೈಕಿ 2,063 ಮಂದಿಯನ್ನು ಈ ವೇಳೆ ಸೂಕ್ಷ್ಮವಾಗಿ ಅವಲೋಕಿಸಲಾಗಿದೆ. ಈ ನಿರ್ದಿಷ್ಟ ರೋಗ ನಿರೋಧಕ ಅಂಶವು ಕೋವಿಡ್‌ಗೆ ಆ ವ್ಯಕ್ತಿ ತುತ್ತಾಗಿದ್ದಾರೆ ಎಂಬುದರ ಸ್ಪಷ್ಟ ಲಕ್ಷಣವಾಗಿದೆ.
‘ಯಾಸ್’ ಚಂಡಮಾರುತ ಪ್ರಭಾವ, ಮೇ 29 ರ ವರೆಗೆ ಮಳೆ ಸಾಧ್ಯತೆ
ಆರೋಗ್ಯ ಸೇವಾ ಸಿಬ್ಬಂದಿಯ ಪೈಕಿ 14.5% ಮಂದಿಗೆ ಸೋಂಕು ತಗುಲಿದೆ ಎಂದು ರಕ್ತಪರೀಕ್ಷೆಗಳಿಂದ ತಿಳಿದುಬಂದಿದ್ದು, ಇದು ಸಾಮಾನ್ಯ ಜನರಿಗಿಂತ ಮೂರು ಪಟ್ಟು ಹೆಚ್ಚಿನ ಸಾಧ್ಯತೆಯಾಗಿದೆ.
ವಿವಾಹ ವಾರ್ಷಿಕೋತ್ಸವಕ್ಕೆ 1 ಕೆಜಿ ಮಾಂಗಲ್ಯ ಸೂತ್ರ ಗಿಫ್ಟ್..! ಖಾಕಿ ತನಿಖೆಯಲ್ಲಿ ಬಯಲಾಯ್ತು ಅಸಲಿಯತ್ತು
ಇದಕ್ಕಿಂತ ಹೆಚ್ಚಾಗಿ ಕೋವಿಡ್‌ಗೆ ತುತ್ತಾಗುವ ಸಾಧ್ಯತೆಯನ್ನು ದಂತ ವೈದ್ಯರು (26 ಪ್ರತಿಶತ), ಆರೋಗ್ಯ ಸೇವಾ ಸಹಾಯಕ ಸಿಬ್ಬಂದಿ (23.3 ಪ್ರತಿಶತ), ಆಸ್ಪತ್ರೆ ಪೋರ್ಟರ್‌ಗಳು (22.2 ಪ್ರತಿಶತ) ಹೊಂದಿದ್ದಾರೆ. ಆಸ್ಪತ್ರೆಯ ವೈದ್ಯರು ಹಾಗೂ ಆಡಳಿತ ಸಿಬ್ಬಂದಿ (21.1 ಪ್ರತಿಶತ) ಸಹ ಸೋಂಕಿಗೆ ತುತ್ತಾಗುವ ಸಾಧ್ಯತೆ ಜೋರಾಗಿಯೇ ಹೊಂದಿದ್ದಾರೆ. ಈ ವರ್ಗಗಳ ಮಂದಿಯಲ್ಲಿ ಸೋಂಕು ತಗುಲಿದಾಗ ಅರಿವಿಗೆ ಬಾರದೇ ಇರುವ ಸಾಧ್ಯತೆಗಳೇ ಹೆಚ್ಚಿವೆ.