alex Certify ವಿವಾಹ ವಾರ್ಷಿಕೋತ್ಸವಕ್ಕೆ 1 ಕೆಜಿ ಮಾಂಗಲ್ಯ ಸೂತ್ರ ಗಿಫ್ಟ್​..! ಖಾಕಿ ತನಿಖೆಯಲ್ಲಿ ಬಯಲಾಯ್ತು ಅಸಲಿಯತ್ತು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿವಾಹ ವಾರ್ಷಿಕೋತ್ಸವಕ್ಕೆ 1 ಕೆಜಿ ಮಾಂಗಲ್ಯ ಸೂತ್ರ ಗಿಫ್ಟ್​..! ಖಾಕಿ ತನಿಖೆಯಲ್ಲಿ ಬಯಲಾಯ್ತು ಅಸಲಿಯತ್ತು

ಮೊಣಕಾಲಷ್ಟು ಉದ್ದವಿದ್ದ ಚಿನ್ನದ ಮಂಗಲ ಸೂತ್ರ ಧರಿಸಿದ್ದ ಮಹಿಳೆಯ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿತ್ತು. ಪತಿಯು ಮದುವೆ ವಾರ್ಷಿಕೋತ್ಸವಕ್ಕೆ ನೀಡಿದ್ದ ಉಡುಗೊರೆ ಇದು ಎನ್ನಲಾಗಿದೆ. ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆದ ವಿಡಿಯೋದಲ್ಲಿ ಚಿನ್ನದ ಆಭರಣ ಧರಿಸಿದ್ದ ಜೋಡಿ ಹಾಡುತ್ತಿರೋದನ್ನ ಕಾಣಬಹುದಾಗಿದೆ.

ಇದಾದ ಬಳಿಕ ಈ ಮಂಗಳ ಸೂತ್ರ 1 ಕೆಜಿ ಚಿನ್ನದಿಂದ ಮಾಡಲಾಗಿದೆ ಎಂದೇ ಹೇಳಲಾಗಿತ್ತು. ಆದರೆ ಇದೊಂದು ನಕಲಿ ಚಿನ್ನವಾಗಿದ್ದು ಕೇವಲ 38 ಸಾವಿರ ರೂಪಾಯಿಗೆ ಖರೀದಿ ಮಾಡಲಾಗಿದೆ ಎಂದು ತಿಳಿದುಬಂದಿದೆ.

ವಿಡಿಯೋ ವೈರಲ್​ ಆಗುತ್ತಿದ್ದಂತೆಯೇ ಪೊಲೀಸರು ಮಹಾರಾಷ್ಟ್ರದ ಭಿವಾಂಡಿಯಲ್ಲಿದ್ದ ದಂಪತಿಯನ್ನ ಭೇಟಿಯಾಗಿದ್ದಾರೆ. ಈ ಮಂಗಳಸೂತ್ರದಿಂದ ದಂಪತಿಯ ಜೀವಕ್ಕೆ ಅಪಾಯ ಉಂಟಾಗಬಹುದು ಎಂಬ ಕಾರಣಕ್ಕೆ ಪೊಲೀಸರು ದಂಪತಿಯನ್ನ ಭೇಟಿಯಾಗಿದ್ದಾರೆ. ಪೊಲೀಸರು ಪ್ರಶ್ನೆ ಕೇಳಿದ ವೇಳೆ ಬಾಲಾ ಇದು ಕೇವಲ 38 ಸಾವಿರ ರೂಪಾಯಿ ಬೆಲೆ ಬಾಳುವ ಆಭರಣ ಎಂದು ಹೇಳಿದ್ದಾಗಿ ತಿಳಿದುಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...