alex Certify ಸುಖ ಜೀವನಕ್ಕೆ ಇಲ್ಲಿದೆ 6 ಸರಳ ಸೂತ್ರಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸುಖ ಜೀವನಕ್ಕೆ ಇಲ್ಲಿದೆ 6 ಸರಳ ಸೂತ್ರಗಳು

ಹರ್ಷ ಗೋಯಂಕಾ ಸದಾ ಟ್ವಿಟರ್ ಖಾತೆಯ ಮೂಲಕ ಕುತೂಹಲದ ಹಾಗೂ ಪ್ರೇರಣಾದಾಯಕ ಅಂಶಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಈ ಬಾರಿ ಅವರು ಸುಖ ಜೀವನಕ್ಕೆ ಸರಳ ಸೂತ್ರಗಳ ಕುರಿತು ತಮ್ಮ ವೈದ್ಯರು ನೀಡಿದ ಸಲಹೆಗಳನ್ನು ಹಂಚಿಕೊಂಡಿದ್ದಾರೆ.

ಆರ್.ಪಿ.ಜಿ. ಗ್ರೂಪ್ ಅಧ್ಯಕ್ಷ ಹರ್ಷ ಗೋಯಂಕಾ ಅವರು 6 ಟಿಪ್ಸ್ ಹಂಚಿಕೊಂಡಿದ್ದಾರೆ. ಸರಿಯಾದ ಸಮಯಕ್ಕೆ ಆರೋಗ್ಯಕರ ಆಹಾರ ಸೇವಿಸುವುದು, ನಿರಂತರ ವ್ಯಾಯಾಮ, ಸೂರ್ಯನ ಬಿಸಿಲಿಗೆ ತೆರೆದುಕೊಳ್ಳುವುದು ಮುಂತಾದ ಸಲಹೆಗಳನ್ನು ಅವರು ನೀಡಿದ್ದಾರೆ.

“ಪರಿಸರದ ಜತೆ ಸಂಬಂಧ ಇಟ್ಟುಕೊಳ್ಳಿ, ಜಾಸ್ತಿ ನಿದ್ರೆ ಮಾಡಿ, ಒತ್ತಡ ಕಡಿಮೆ ಮಾಡಿಕೊಳ್ಳಿ” ಎಂದು ಗೋಯಂಕಾ ಬರೆದಿದ್ದಾರೆ. ಗೋಯಂಕಾ ಅವರ ಟ್ವೀಟ್ ನ್ನು ಸಾಕಷ್ಟು ಜನ ರೀ ಟ್ವೀಟ್ ಮಾಡಿದ್ದಾರೆ. ಜಾಲತಾಣಗಳಲ್ಲಿ ಇದು ಚರ್ಚೆಗೆ ಕಾರಣವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...