ಬಾಬಾ ರಾಮ್ದೇವ್ ‘ಈಡಿಯಟ್’ ಎಂದ ನಿರ್ಮಾಪಕ ಹನ್ಸಲ್ ಮೆಹ್ತಾ..! 26-05-2021 7:52AM IST / No Comments / Posted In: Latest News, India ಭಾರತೀಯ ವೈದ್ಯಕೀಯ ಸಂಘದಲ್ಲಿ ಕೆಲಸ ಮಾಡುತ್ತಿರುವ ಮುಂಚೂಣಿ ಕಾರ್ಯಕರ್ತರ ಸಮಯವನ್ನ ವ್ಯರ್ಥ ಮಾಡಿದ್ದಾರೆ ಎಂದು ಆರೋಪಿಸಿ ಬಾಬಾ ರಾಮದೇವ್ರನ್ನ ಈಡಿಯಟ್ ಎಂದು ನಿರ್ಮಾಪಕ ಹನ್ಸಲ್ ಮೆಹ್ತಾ ಜರಿದಿದ್ದಾರೆ. ಅಲೋಪತಿಯನ್ನ ಸ್ಟುಪಿಡ್ ಸೈನ್ಸ್ ಎಂದು ವಿವಾದ ಸೃಷ್ಟಿಸಿದ್ದ ಬಾಬಾ ರಾಮ್ದೇವ್ ಬಳಿಕ ಕ್ಷಮೆಯಾಚಿಸಿದ್ದರು. ಆದರೆ ಕ್ಷಮೆ ಕೇಳಿದ 24 ಗಂಟೆಯೊಳಗಾಗಿ ಅಲೋಪತಿಯ ವಿರುದ್ಧ ಐಎಂಎಗೆ 25 ಪ್ರಶ್ನೆಗಳನ್ನ ಕೇಳಿದ್ದರು. ಈ ಪ್ರಶ್ನೆಗಳಲ್ಲಿ ಅಧಿಕ ರಕ್ತದೊತ್ತಡ ಹಾಗೂ ಡಯಾಬಿಟೀಸ್ನಂತಹ ಕಾಯಿಲೆಗಳಿಗೆ ಶಾಶ್ವತ ಪರಿಹಾರ ಇದೆಯೇ ಎಂದು ಕೇಳಿದ್ದರು. ಇದೀಗ ಬಾಬಾ ರಾಮದೇವ್ರ ಈ ಪ್ರಶ್ನೆ ಸಂಬಂಧ ಪ್ರತಿಕ್ರಿಯಿಸಿರುವ ಹನ್ಸಲ್ ಮೆಹ್ತಾ ಈ ಈಡಿಯಟ್ ಮುಂಚೂಣಿ ಕಾರ್ಯಕರ್ತರ ಸಮಯವನ್ನ ವ್ಯರ್ಥ ಮಾಡ್ತಿದ್ದಾರೆ ಎಂದು ಹೇಳಿದ್ದಾರೆ. ಅಲೋಪತಿಯಲ್ಲಿ ಅಧಿಕ ರಕ್ತದೊತ್ತಡ, ಟೈಪ್ 1 & ಟೈಪ್ 2 ಡಯಾಬಿಟೀಸ್, ಸಂಧಿವಾತ, ಥೈರಾಯ್ಡ್, ತಲೆನೋವು, ಮೈಗ್ರೇನ್ ಸೇರಿದಂತೆ ಇನ್ನೂ ಅನೇಕ ಕಾಯಿಲೆಗಳಿಗೆ ಅಲೋಪತಿಯಲ್ಲಿ ಶಾಶ್ವತ ಪರಿಹಾರ ಇದೆಯೇ ಎಂದು ಭಾರತೀಯ ವೈದ್ಯಕೀಯ ಸಂಘವನ್ನ ಟ್ವಿಟರ್ನಲ್ಲಿ ಬಹಿರಂಗ ಪತ್ರವನ್ನ ಹರಿಬಿಡುವ ಮೂಲಕ ಬಾಬಾ ರಾಮ್ ದೇವ್ ಪ್ರಶ್ನಿಸಿದ್ದರು. This idiot is wasting precious time of our frontline workers. https://t.co/kcdEEtFe7z — Hansal Mehta (@mehtahansal) May 25, 2021