alex Certify ನೀನು ಹೆಂಗಸು ಅಂತಾ ಸುಮ್ಮನೇ ಬಿಡ್ತೀದಿನಿ ಎಂದು ಮಹಿಳಾ ಅಧಿಕಾರಿಗೆ ಕಾಂಗ್ರೆಸ್ ಶಾಸಕನ ಆವಾಜ್..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೀನು ಹೆಂಗಸು ಅಂತಾ ಸುಮ್ಮನೇ ಬಿಡ್ತೀದಿನಿ ಎಂದು ಮಹಿಳಾ ಅಧಿಕಾರಿಗೆ ಕಾಂಗ್ರೆಸ್ ಶಾಸಕನ ಆವಾಜ್..!

ಮಹಿಳೆಯರ ಬಗ್ಗೆ ಮಧ್ಯ ಪ್ರದೇಶ ಕಾಂಗ್ರೆಸ್​​ ಮಾಜಿ ಸಚಿವ ವಿವಾದಾತ್ಮಕ ಹೇಳಿಕೆ ನೀಡಿದ ಬೆನ್ನಲ್ಲೇ ಇದೀಗ ಕಾಂಗ್ರೆಸ್​ನ ಮತ್ತೊಬ್ಬ ಶಾಸಕ ಮಹಿಳಾ ಅಧಿಕಾರಿ ಜೊತೆ ಅಸಭ್ಯವಾಗಿ ವರ್ತಿಸುವ ಮೂಲಕ ಜನತೆಯ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಸೋಶಿಯಲ್​ ಮೀಡಿಯಾದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋದಲ್ಲಿ, ಕಾಂಗ್ರೆಸ್​ ಶಾಸಕ ಹರ್ಷ್​ ವಿಜಯ್​ ಗೆಹ್ಲೋಟ್​​ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್​ ಅಧಿಕಾರಿ ಕಾಮಿನಿ ಠಾಕೂರ್​ ಎಂಬವರ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ.

ನೀನೊಬ್ಬ ಹೆಂಗಸು. ಒಂದು ವೇಳೆ ನೀನೇನಾದರೂ ಗಂಡಸಾಗಿದ್ದರೆ ಮೊದಲು ನಿನ್ನ ಕಾಲರ್​ ಪಟ್ಟಿ ಹಿಡಿದು ಬಳಿಕ ನಿನಗೆ ಮೆಮೊ ಕಳುಹಿಸುತ್ತಿದ್ದೆ ಎಂದು ಶಾಸಕ ಅಧಿಕಾರಿಗೆ ವಾರ್ನಿಂಗ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಶೇರ್​ ಆಗ್ತಿದೆ.

ರವಿವಾರ ಮಧ್ಯ ಪ್ರದೇಶ – ರಾಜಸ್ಥಾನ ಗಡಿಯಲ್ಲಿರುವ ರತ್ಲಾಮ್​ ಜಿಲ್ಲೆಯ ಸೈಲಾನಾ ಪಟ್ಟಣದಲ್ಲಿ ಈ ಘಟನೆ ಸಂಭವಿಸಿದೆ. ಕೇಂದ್ರ ಸರ್ಕಾರದ ಕೃಷಿ ಮಸೂದೆ ವಿರೋಧಿಸಿ ಕಾಂಗ್ರೆಸ್​ ರ್ಯಾಲಿಯಲ್ಲಿ ಭಾಗಿಯಾಗಿದ್ದ ವೇಳೆ ಈ ಘಟನೆ ನಡೆದಿದೆ. ಶಾಸಕ ಹರ್ಷ ವಿಜಯ ಗೆಹ್ಲೋಟ್​ ನೇತೃತ್ವದಲ್ಲಿ ಪ್ರತಿಭಟನಾಕಾರರು ಎಸ್​ಡಿಎಂ ಕಚೇರಿಗೆ ತಲುಪಿದ್ದ ವೇಳೆ ಶಾಸಕ ಈ ರೀತಿ ಆವಾಜ್​ ಹಾಕಿದ್ದಾರೆ.

— Anurag Dwary (@Anurag_Dwary) January 18, 2021

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...