alex Certify ಹೆಣ್ಣು ಮಗು ಜನಿಸಿದ ಸಂಭ್ರಮಕ್ಕೆ ಉಚಿತ ಹೇರ್ ಕಟ್ ಸೌಲಭ್ಯ ನೀಡಿದ ಕ್ಷೌರಿಕ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೆಣ್ಣು ಮಗು ಜನಿಸಿದ ಸಂಭ್ರಮಕ್ಕೆ ಉಚಿತ ಹೇರ್ ಕಟ್ ಸೌಲಭ್ಯ ನೀಡಿದ ಕ್ಷೌರಿಕ..!

ಹೆಣ್ಣುಮಗಳು ಜನಿಸಿದ ಸಂಭ್ರಮಕ್ಕೆ ಕ್ಷೌರಿಕನೊಬ್ಬ ತನ್ನ ಮೂರು ಅಂಗಡಿಗಳಲ್ಲಿ ಗ್ರಾಹಕರಿಗೆ ಉಚಿತ ಹೇರ್​ಕಟ್​ ಸೌಲಭ್ಯ ನೀಡಿದ ಘಟನೆ ಮಧ್ಯಪ್ರದೇಶದ ಗ್ವಾಲಿಯರ್​ನಲ್ಲಿ ನಡೆದಿದೆ.

ಈ ವಿಚಾರವಾಗಿ ಮಾತನಾಡಿದ ಸಲ್ಮಾನ್​, ನನ್ನ ಮಗಳು ಹುಟ್ಟಿದ ದಿನದಂದು ನಾನು ಎಲ್ಲರ ಮುಖದಲ್ಲೂ ಸಂತೋಷ ತರಲು ಇಚ್ಚಿಸುತ್ತೇನೆ. ನನ್ನ ಮಗಳು ಜನನವಾದ ದಿನ ಯಾರೂ ದುಃಖದಲ್ಲಿ ಇರಬಾರದು ಎಂದು ಹೇಳಿದ್ರು.

ನಮ್ಮ ಮನೆಗೆ ಮಗಳನ್ನ ಕರೆತರುವ ಸಂಭ್ರಮಕ್ಕೆ ಜನವರಿ 4ರಂದು ನಮ್ಮ ಗ್ರಾಹಕರಿಗೆ ಉಚಿತ ಹೇರ್​ಕಟ್​ ಸೌಲಭ್ಯ ಸಿಗಲಿದೆ ಎಂದು ಅಂಗಡಿ ಮುಂದೆ ಪೋಸ್ಟರ್​ ಅಂಟಿಸಿದ್ದರು.

ಹೆಣ್ಣು ಮಗು ಜನಿಸಿತು ಎಂದ ಕೂಡಲೇ ಅನೇಕರು ಹತಾಶೆಯ ಭಾವವನ್ನ ವ್ಯಕ್ತಪಡಿಸ್ತಾರೆ. ಆದರೆ ನಾನು ಜನವರಿ 4ರಂದು ನನ್ನ ಮೂರು ಅಂಗಡಿಗಳಲ್ಲಿ ಈ ವಿಶೇಷ ಆಫರ್​ ನೀಡಿ ಎಲ್ಲರ ಮುಖದಲ್ಲಿ ಸಂತಸ ತರುವ ಪ್ರಯತ್ನ ಮಾಡಿದ್ದೇನೆ ಎನ್ನುತ್ತಾರೆ ಕ್ಷೌರಿಕ ಸಲ್ಮಾನ್​.

ಸಲ್ಮಾನ್​​​ಗೆ ಡಿಸೆಂಬರ್ 26ರಂದು ಹೆಣ್ಣು ಮಗುವಿನ ಜನನವಾಗಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...