
ಈ ವಿಚಾರವಾಗಿ ಮಾತನಾಡಿದ ಸಲ್ಮಾನ್, ನನ್ನ ಮಗಳು ಹುಟ್ಟಿದ ದಿನದಂದು ನಾನು ಎಲ್ಲರ ಮುಖದಲ್ಲೂ ಸಂತೋಷ ತರಲು ಇಚ್ಚಿಸುತ್ತೇನೆ. ನನ್ನ ಮಗಳು ಜನನವಾದ ದಿನ ಯಾರೂ ದುಃಖದಲ್ಲಿ ಇರಬಾರದು ಎಂದು ಹೇಳಿದ್ರು.
ನಮ್ಮ ಮನೆಗೆ ಮಗಳನ್ನ ಕರೆತರುವ ಸಂಭ್ರಮಕ್ಕೆ ಜನವರಿ 4ರಂದು ನಮ್ಮ ಗ್ರಾಹಕರಿಗೆ ಉಚಿತ ಹೇರ್ಕಟ್ ಸೌಲಭ್ಯ ಸಿಗಲಿದೆ ಎಂದು ಅಂಗಡಿ ಮುಂದೆ ಪೋಸ್ಟರ್ ಅಂಟಿಸಿದ್ದರು.
ಹೆಣ್ಣು ಮಗು ಜನಿಸಿತು ಎಂದ ಕೂಡಲೇ ಅನೇಕರು ಹತಾಶೆಯ ಭಾವವನ್ನ ವ್ಯಕ್ತಪಡಿಸ್ತಾರೆ. ಆದರೆ ನಾನು ಜನವರಿ 4ರಂದು ನನ್ನ ಮೂರು ಅಂಗಡಿಗಳಲ್ಲಿ ಈ ವಿಶೇಷ ಆಫರ್ ನೀಡಿ ಎಲ್ಲರ ಮುಖದಲ್ಲಿ ಸಂತಸ ತರುವ ಪ್ರಯತ್ನ ಮಾಡಿದ್ದೇನೆ ಎನ್ನುತ್ತಾರೆ ಕ್ಷೌರಿಕ ಸಲ್ಮಾನ್.
ಸಲ್ಮಾನ್ಗೆ ಡಿಸೆಂಬರ್ 26ರಂದು ಹೆಣ್ಣು ಮಗುವಿನ ಜನನವಾಗಿತ್ತು.
