ದೇಶದಲ್ಲಿ ವೈದ್ಯಕೀಯ ಆಮ್ಲಜನಕದ ತೀವ್ರ ಕೊರತೆಯುಂಟಾಗಿದೆ. ಕೊರೊನಾ ಸೋಂಕಿತರ ಸಂಖ್ಯೆ ವಿಪರೀತವಾಗಿ ಆಮ್ಲಜನಕ ಅಪೇಕ್ಷಿಸುತ್ತಿರುವವ ಸಂಖ್ಯೆಯೂ ಹೆಚ್ಚಾಗಿದೆ.
ಇದೇ ವೇಳೆ ಗಾಜಿಯಾಬಾದ್‌ನ ಇಂದಿರಾಪುರಂನ ಶ್ರೀ ಗುರು ಸಿಂಗ್ ಸಭಾ ಗುರುದ್ವಾರವು ಖಲ್ಸಾ ಹೆಲ್ಪ್ ಇಂಟರ್‌ನ್ಯಾಷನಲ್ ಎಂಬ ಎನ್‌ಜಿಒ ಜೊತೆಗೆ ಸೇರಿ
ಆಕ್ಸಿಜನ್ ಲಂಗರ್ ತೆರೆದಿದೆ.
ʼವಿವಾದ್ ಸೇ ವಿಶ್ವಾಸ್ʼ: ತೆರಿಗೆ ವಿವಾದ ಬಗೆಹರಿಸಿಕೊಳ್ಳಲು ಅವಧಿ ವಿಸ್ತರಣೆ
ರೋಗಿಗಳು ಆಸ್ಪತ್ರೆಯ ಬೆಡ್ ಲಭ್ಯವಾಗುವವರೆಗೆ ಅಥವಾ ಮನೆಯಲ್ಲಿ ಐಸೋಲೇಷನ್ ಆಗುವ ಹಂತಕ್ಕೆ ಬರುವವರೆಗೆ ಆಕ್ಸಿಜನ್ ಅಗತ್ಯವಿದ್ದರೆ ಗುರುದ್ವಾರದಲ್ಲಿ ವ್ಯವಸ್ಥೆ ಮಾಡಲಾಗುತ್ತಿದೆ.
ಆಕ್ಸಿಜನ್ ಸಿಲಿಂಡರ್‌ಗೆ ಬುಕ್ ಮಾಡಲು ಸಹಾಯವಾಣಿ ಸಹ ಪ್ರಾರಂಭಿಸಲಾಗಿದೆ ಎಂದು ಸಿಖ್ ಸ್ವಯಂಸೇವಕರು ತಿಳಿಸಿದ್ದಾರೆ. ಇಲ್ಲಿಯವರೆಗೂ ನಾವು ಸುಮಾರು 200 ಜೀವಗಳನ್ನು ಉಳಿಸಲು ಸಾಧ್ಯವಾಗಿದೆ ಎಂದು ಹೇಳಿಕೊಂಡಿದ್ದಾರೆ.
https://twitter.com/Aparna/status/1385621792618729477?ref_src=twsrc%5Etfw%7Ctwcamp%5Etweetembed%7Ctwterm%5E1385639014217048067%7Ctwgr%5E%7Ctwcon%5Es3_&ref_url=https%3A%2F%2Findianexpress.com%2Farticle%2Ftrending%2Ftrending-in-india%2Fgurudwara-in-indirapuram-starts-oxygen-langar-to-help-to-covid-19-patients-7287206%2F