ಗುಜರಾತ್ನ ಪಕ್ಷೇತರ ಶಾಸಕ ಜಿಗ್ನೇಶ್ ಮೇವಾನಿಯನ್ನ ಅಶಿಸ್ತು ತೋರಿದ ಆರೋಪದ ಹಿನ್ನೆಲೆಯಲ್ಲಿ ಸದನದಿಂದ ಅಮಾನತು ಮಾಡಲಾಗಿದೆ. ಸದನದಲ್ಲಿ ಸ್ಪೀಕರ್ ಅನುಮತಿ ಕೇಳದೆಯೇ ದಲಿತ ವ್ಯಕ್ತಿಯ ಕೊಲೆಯ ವಿಚಾರವನ್ನ ಸದನದಲ್ಲಿ ಎತ್ತಿದ ಹಿನ್ನೆಲೆಯಲ್ಲಿ ಜಿಗ್ನೇಶ್ರನ್ನ ಅಮಾನತು ಮಾಡಲಾಗಿದೆ.
ಸಭಾಪತಿ ರಾಜೇಂದ್ರ ತ್ರಿವೇದಿ ಆದೇಶದ ಹಿನ್ನೆಲೆ ಜಿಗ್ನೇಶ್ರನ್ನ ಸದನದಿಂದ ಹೊರ ಹಾಕಲಾಗಿದೆ. ಗುರುವಾರ ಕೂಡ ಇದೇ ಕಾರಣಕ್ಕೆ ಮೇವಾನಿಯವರನ್ನ ಸದನದಿಂದ ಹೊರಗೆ ಕಳುಹಿಸಲಾಗಿತ್ತು.
ಪ್ರಶ್ನಾವಳಿ ಅವಧಿ ಮುಗಿಯುತ್ತಿದ್ದಂತೆಯೇ ವದ್ಗಂ ಕ್ಷೇತ್ರದ ಶಾಸಕ ಮೇವಾನಿ ಕೂಡಲೇ ಎದ್ದು ನಿಂತು ಮಾರ್ಚ್ 2ರಂದು ಕೊಲೆಯಾದ ದಲಿತ ವ್ಯಕ್ತಿಯ ಫೋಟೋವನ್ನ ಸದನಕ್ಕೆ ತೋರಿಸಿದ್ರು. ಪೋಟೋ ಇದ್ದ ಪೋಸ್ಟರ್ನ ಮೇಲೆ ಅಪರಾಧಿಗಳನ್ನ ಯಾಕೆ ಬಂಧಿಸಿಲ್ಲ ಎಂದು ಬರೆಯಲಾಗಿತ್ತು.
ಈ ವೇಳೆ ಸಭಾಪತಿ ತ್ರಿವೇದಿ ಶಾಸಕ ಜಿಗ್ನೇಶ್ರಿಗೆ ಯಾವುದೇ ವಿಚಾರವನ್ನ ಎತ್ತುವ ಮೊದಲು ಅನುಮತಿ ಕೇಳಿ ಎಂದು ಹೇಳಿದ್ದಾರೆ. ಸಭಾಪತಿಯ ಹೇಳಿಕೆಯ ಬಳಿಕವೂ ತಮ್ಮ ಸ್ಥಾನದಲ್ಲಿ ಕೂರದ ಕಾರಣ ಜಿಗ್ನೇಶ್ರನ್ನ ಸದನದಿಂದ ಹೊರಕಳಿಸಲಾಗಿದೆ.