ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಕೊರೊನಾ ಸೋಂಕಿಗೊಳಗಾಗಿದ್ದಾರೆ. ಭಾನುವಾರ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ರೂಪಾನಿ ವೇದಿಕೆಯಲ್ಲಿಯೇ ಪ್ರಜ್ಞೆ ತಪ್ಪಿ ಬಿದ್ದಿದ್ದರು. ನಂತ್ರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ವೇಳೆ ಅವ್ರಿಗೆ ಕೊರೊನಾ ಸೋಂಕಿರುವುದು ಕಂಡು ಬಂದಿದೆ.
ವಡೋದರಾದ ನಿಜಾಂಪುರದಲ್ಲಿ ನಡೆದ ಚುನಾವಣೆ ರ್ಯಾಲಿಯೊಂದರಲ್ಲಿ ರೂಪಾನಿ ಪಾಲ್ಗೊಂಡಿದ್ದರು. ವೇದಿಕೆ ಮೇಲಿದ್ದ ಅವ್ರು ಪ್ರಜ್ಞೆ ತಪ್ಪಿದ್ದರು. ತಕ್ಷಣ ಅವ್ರಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತು. ನಂತ್ರ ಚೇತರಿಸಿಕೊಂಡಿದ್ದ ರೂಪಾನಿ, ತಾವೇ ವೇದಿಕೆ ಮೆಟ್ಟಿಲಿಳಿದಿದ್ದರು. ನಂತ್ರ ಅವ್ರನ್ನು ಹೆಲಿಕಾಪ್ಟರ್ ಮೂಲಕ ಅಹಮದಾಬಾದ್ ಗೆ ಕರೆದೊಯ್ದು ಯುಎನ್ ಮೆಹ್ತಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ನಕಲಿ ಚಾಲನಾ ಪರವಾನಗಿ ಪತ್ತೆ ಹಚ್ಚೋದು ಈಗ ಬಲು ಸುಲಭ
ನಿನ್ನೆ ರಾತ್ರಿ ಯಾವುದೇ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿರಲಿಲ್ಲ. ಕೊರೊನಾ ಪರೀಕ್ಷೆ ಕೂಡ ನಡೆದಿತ್ತು. ಇಂದು ವರದಿ ಬಂದಿದ್ದು, ಕೊರೊನಾ ಇರುವುದು ದೃಢಪಟ್ಟಿದೆ. ರೂಪಾನಿ ಸ್ಥಿತಿ ಸ್ಥಿರವಾಗಿದ್ದು, ಯಾವುದೇ ಅಪಾಯವಿಲ್ಲವೆಂದು ವೈದ್ಯರು ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದಾರೆ ಎನ್ನಲಾಗಿದೆ. ಗುಜರಾತಿನ ಆರು ನಗರಗಳಲ್ಲಿ ಪುರಸಭೆ ಚುನಾವಣೆ ನಡೆಯುತ್ತಿದೆ. ಇದ್ರ ಪ್ರಚಾರದಲ್ಲಿ ಸಿಎಂ ಬ್ಯುಸಿಯಿದ್ದರು.