alex Certify 71 ವರ್ಷದ ಪತ್ನಿ ಮೇಲೆ ಪತಿಗಿತ್ತು ಶಂಕೆ..! ಮುಂದೆ ನಡೆದಿದ್ದು ಘನಘೋರ ಕೃತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

71 ವರ್ಷದ ಪತ್ನಿ ಮೇಲೆ ಪತಿಗಿತ್ತು ಶಂಕೆ..! ಮುಂದೆ ನಡೆದಿದ್ದು ಘನಘೋರ ಕೃತ್ಯ

78 ವರ್ಷ ವಯಸ್ಸಿನ ನಿವೃತ್ತ ಇಂಜಿನಿಯರ್​ ಪದೇ ಪದೇ ಚಾರಿತ್ರ್ಯದ ಬಗ್ಗೆ ಅನುಮಾನ ಪಡ್ತಿರೋದ್ರಿಂದ ಬೇಸತ್ತ ಪತ್ನಿ ಆತನನ್ನ ಕೊಲೆ ಮಾಡಿದ ಘಟನೆ ಸೂರತ್​ನ ವಲ್ಸದ್​ನಲ್ಲಿ ನಡೆದಿದೆ.
ಕೊಲೆಯಾದ ವ್ಯಕ್ತಿಯ ಸೋದರಳಿಯ ಕಮಲೇಶ್​ ನೀಡಿದ್ದ ದೂರನ್ನ ಆಧರಿಸಿದ ಪೊಲೀಸರು ಪತ್ನಿ 71 ವರ್ಷದ ಲಕ್ಷ್ಮೀ ಎಂಬವರನ್ನ ಬಂಧಿಸಿದ್ದಾರೆ.

ಸೋಮವಾರ ಲಕ್ಷ್ಮೀ ದೇವಸ್ಥಾನದಿಂದ ಮನೆಗೆ ವಾಪಸ್ಸಾಗುತ್ತಿದ್ದಂತೆಯೇ ಪತಿ ಆಕೆ ಬೇರೊಬ್ಬ ಪುರುಷನನ್ನ ಭೇಟಿಯಾಗಿ ಬಂದಿದ್ದಾಳೆ ಎಂದು ಶಂಕಿಸುತ್ತಿದ್ದರು. ದಿನಪೂರ್ತಿ ಆಕೆಗೆ ಇದೇ ಮಾತನ್ನ ಹೇಳಿ ಹಿಂಸಿಸಿದ್ದು ಮಾತ್ರವಲ್ಲದೇ ಆಕೆಯ ಮೇಲೆ ಗಾಜಿನ ಬಾಟಲಿಯನ್ನ ಎಸೆಯಲು ಯತ್ನಿಸಿದ್ದರು ಎನ್ನಲಾಗಿದೆ.

ನನ್ನ ಚಿಕ್ಕಪ್ಪ – ಚಿಕ್ಕಮ್ಮ ದಿನವಿಡಿ ಜಗಳ ಮಾಡಿಕೊಳ್ತಿದ್ರು ಅಂತಾ ಕಮಲೇಶ್​ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತನ್ನ ಚಿಕ್ಕಪ್ಪ ಅನೇಕ ಬಾರಿ ಚಿಕ್ಕಮ್ಮನ ಚಾರಿತ್ರ್ಯದ ಮೇಲೆ ಅನುಮಾನಪಟ್ಟಿದ್ದಾರೆ ಎಂದೂ ಕಮಲೇಶ್​ ಹೇಳಿದ್ದಾರೆ.

ಆದರೆ ದಿನದಿಂದ ದಿನಕ್ಕೆ ಅಮೃತಾಲ್​ರ ಅನುಮಾನ ಹೆಚ್ಚಾಗುತ್ತಲೇ ಇತ್ತು. ಆಕೆಯ ಮೇಲೆ ಅನೇಕ ಬಾರಿ ಹಲ್ಲೆಗೂ ಅಮೃತಾಲ್ ಯತ್ನಿಸಿದ್ದರು. ಇದರಿಂದ ಕೋಪಗೊಂಡ ಲಕ್ಷ್ಮೀ ಬಟ್ಟೆ ತೊಳೆಯಲು ಬಳಸುವ ಕೋಲಿನಿಂದ ಪತಿಗೆ ಥಳಿಸಿದ್ದಾರೆ. ಸ್ಥಳದಲ್ಲೇ ಕುಸಿದು ಬಿದ್ದ ಅಮೃತಾಲ್​​ ಸಾವನ್ನಪ್ಪಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...