alex Certify ಶಾಕಿಂಗ್: ಕೊರೊನಾ ಸೋಂಕು ಹೊಂದಿದ್ದ 15 ದಿನಗಳ ನವಜಾತ ಶಿಶು ಸಾವು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಕಿಂಗ್: ಕೊರೊನಾ ಸೋಂಕು ಹೊಂದಿದ್ದ 15 ದಿನಗಳ ನವಜಾತ ಶಿಶು ಸಾವು..!

ಕೊರೊನಾದಿಂದ ಬಳಲುತ್ತಿದ್ದ ಗರ್ಭಿಣಿಗೆ ಜನಿಸಿದ ಹೆಣ್ಣು ಶಿಶು 15 ದಿನಗಳಲ್ಲಿ ಮೃತಪಟ್ಟ ದಾರುಣ ಘಟನೆ ಗುಜರಾತ್​ನ ಸೂರತ್​ ಪಟ್ಟಣದಲ್ಲಿ ನಡೆದಿದೆ.

ಡೈಮಂಡ್​ ಆಸ್ಪತ್ರೆ ನೀಡಿರುವ ಮಾಹಿತಿಯ ಪ್ರಕಾರ, ಏಪ್ರಿಲ್​ 1ನೇ ತಾರೀಖು ಜನಿಸಿದ ಈ ಮಗು ಕೂಡ ಕೊರೊನಾ ಸೋಂಕನ್ನ ಹೊಂದಿತ್ತು. ಇದಾದ ಬಳಿಕ ಸೋಂಕಿತ ತಾಯಿ ಹಾಗೂ ಮಗುವನ್ನ ಬೇರೆ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು.

ಸೋಂಕಿತ ಮಗುವನ್ನ ಐಸಿಯುವಿನಲ್ಲಿ ಇಡಲಾಗಿತ್ತು. ಅಲ್ಲದೇ ರೆಮಿಡಿಸಿವರ್​ ಇಂಜೆಕ್ಷನ್​ ನ್ನೂ ನೀಡಲಾಗಿತ್ತು ಎಂದು ಹೇಳಿದೆ.

ವೆಂಟಿಲೇಟರ್​ನಲ್ಲಿದ್ದ ಈ ಮಗು ಗುರುವಾರ ರಾತ್ರಿ ಕೊನೆಯುಸಿರೆಳೆದಿದೆ ಎಂದು ಆಸ್ಪತ್ರೆ ಆಡಳಿತ ಮಂಡಳಿ ಮಾಹಿತಿ ನೀಡಿದೆ.

ಕೆಲ ದಿನಗಳ ಹಿಂದಷ್ಟೇ ಕೊರೊನಾದಿಂದ ಗುಣಮುಖರಾಗಿದ್ದ ಸೂರತ್​ನ ಮಾಜಿ ಮೇಯರ್​ ಡಾ. ಜಗದೀಶ್​ ಪಟೇಲ್​, ಮಗುವಿನ ಚಿಕಿತ್ಸೆಗೆ ಪ್ಲಾಸ್ಮಾವನ್ನ ದಾನ ಮಾಡಿದ್ದರು.

ಕಳೆದ 24 ಗಂಟೆಗಳಲ್ಲಿ ಸೂರತ್​ನಲ್ಲಿ 1551 ಹೊಸ ಕೇಸ್​ಗಳು ವರದಿಯಾಗಿದೆ. ಅಲ್ಲದೇ ಗುಜರಾತ್​​ನಲ್ಲಿ ಒಂದು ದಿನದಲ್ಲಿ 8152 ಹೊಸ ಕೇಸ್​ಗಳು ವರದಿಯಾಗಿದ್ದು, ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 3,75,768 ಆಗಿದೆ. ಗುಜರಾತ್​ನಲ್ಲಿ ಒಟ್ಟು 5076 ಮಂದಿ ಕೊರೊನಾದಿಂದ ಸಾವನ್ನಪ್ಪಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...