ಕೊರೊನಾದಿಂದ ಬಳಲುತ್ತಿದ್ದ ಗರ್ಭಿಣಿಗೆ ಜನಿಸಿದ ಹೆಣ್ಣು ಶಿಶು 15 ದಿನಗಳಲ್ಲಿ ಮೃತಪಟ್ಟ ದಾರುಣ ಘಟನೆ ಗುಜರಾತ್ನ ಸೂರತ್ ಪಟ್ಟಣದಲ್ಲಿ ನಡೆದಿದೆ.
ಡೈಮಂಡ್ ಆಸ್ಪತ್ರೆ ನೀಡಿರುವ ಮಾಹಿತಿಯ ಪ್ರಕಾರ, ಏಪ್ರಿಲ್ 1ನೇ ತಾರೀಖು ಜನಿಸಿದ ಈ ಮಗು ಕೂಡ ಕೊರೊನಾ ಸೋಂಕನ್ನ ಹೊಂದಿತ್ತು. ಇದಾದ ಬಳಿಕ ಸೋಂಕಿತ ತಾಯಿ ಹಾಗೂ ಮಗುವನ್ನ ಬೇರೆ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು.
ಸೋಂಕಿತ ಮಗುವನ್ನ ಐಸಿಯುವಿನಲ್ಲಿ ಇಡಲಾಗಿತ್ತು. ಅಲ್ಲದೇ ರೆಮಿಡಿಸಿವರ್ ಇಂಜೆಕ್ಷನ್ ನ್ನೂ ನೀಡಲಾಗಿತ್ತು ಎಂದು ಹೇಳಿದೆ.
ವೆಂಟಿಲೇಟರ್ನಲ್ಲಿದ್ದ ಈ ಮಗು ಗುರುವಾರ ರಾತ್ರಿ ಕೊನೆಯುಸಿರೆಳೆದಿದೆ ಎಂದು ಆಸ್ಪತ್ರೆ ಆಡಳಿತ ಮಂಡಳಿ ಮಾಹಿತಿ ನೀಡಿದೆ.
ಕೆಲ ದಿನಗಳ ಹಿಂದಷ್ಟೇ ಕೊರೊನಾದಿಂದ ಗುಣಮುಖರಾಗಿದ್ದ ಸೂರತ್ನ ಮಾಜಿ ಮೇಯರ್ ಡಾ. ಜಗದೀಶ್ ಪಟೇಲ್, ಮಗುವಿನ ಚಿಕಿತ್ಸೆಗೆ ಪ್ಲಾಸ್ಮಾವನ್ನ ದಾನ ಮಾಡಿದ್ದರು.
ಕಳೆದ 24 ಗಂಟೆಗಳಲ್ಲಿ ಸೂರತ್ನಲ್ಲಿ 1551 ಹೊಸ ಕೇಸ್ಗಳು ವರದಿಯಾಗಿದೆ. ಅಲ್ಲದೇ ಗುಜರಾತ್ನಲ್ಲಿ ಒಂದು ದಿನದಲ್ಲಿ 8152 ಹೊಸ ಕೇಸ್ಗಳು ವರದಿಯಾಗಿದ್ದು, ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 3,75,768 ಆಗಿದೆ. ಗುಜರಾತ್ನಲ್ಲಿ ಒಟ್ಟು 5076 ಮಂದಿ ಕೊರೊನಾದಿಂದ ಸಾವನ್ನಪ್ಪಿದ್ದಾರೆ.