alex Certify ಹಸಿ ತ್ಯಾಜ್ಯದಿಂದ ಇಂಧನ ಉತ್ಪಾದಿಸಿ ಮಾದರಿಯಾಯ್ತು ಹೈದರಾಬಾದ್​ನ ಈ ತರಕಾರಿ ಮಾರುಕಟ್ಟೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಸಿ ತ್ಯಾಜ್ಯದಿಂದ ಇಂಧನ ಉತ್ಪಾದಿಸಿ ಮಾದರಿಯಾಯ್ತು ಹೈದರಾಬಾದ್​ನ ಈ ತರಕಾರಿ ಮಾರುಕಟ್ಟೆ….!

ತರಕಾರಿ ಮಾರುಕಟ್ಟೆಗಳಲ್ಲಿ ತ್ಯಾಜ್ಯಗಳು ಕಾಣಸಿಗೋದು ಸರ್ವೇ ಸಾಮಾನ್ಯ, ಆದರೆ ಹೈದರಾಬಾದ್​ನ ತರಕಾರಿ ಹಾಗೂ ಹಣ್ಣಿನ ಮಾರುಕಟ್ಟೆಯಲ್ಲಿ ಮಾತ್ರ ಈ ತ್ಯಾಜ್ಯಗಳನ್ನ ಬಳಕೆ ಮಾಡಿ ಇಂಧನ​ ಉತ್ಪಾದನೆ ಮಾಡುವ ವಿಶೇಷ ಕಾರ್ಯವನ್ನ ಮಾಡಲಾಗಿದೆ.

ಬೋವೆನ್​ಪಲ್ಲಿ ಮಾರ್ಕೆಟ್​​ನಲ್ಲಿ ಮೊದಲು ಎಲ್ಲಿ ನೋಡಿದ್ರೂ ಹಣ್ಣು, ತರಕಾರಿ ಸಿಪ್ಪೆ, ಸೊಪ್ಪು ಹೀಗೆ ಹಸಿ ತ್ಯಾಜ್ಯಗಳ ರಾಶಿಯೇ ಇರ್ತಿತ್ತು. ಆದರೆ ಇದೀಗ ಈ ಮಾರುಕಟ್ಟೆಯ ಸಣ್ಣ ಕಸವನ್ನೂ ಬಿಡದೇ ಎಲ್ಲವನ್ನೂ ಬಳಸಿ ಅದರಿಂದ 500 ಯುನಿಟ್ ವಿದ್ಯುತ್​ ಹಾಗೂ 30 ಕೆಜಿ ಜೈವಿಕ ಇಂಧನವನ್ನ ಉತ್ಪಾದನೆ ಮಾಡಲಾಗ್ತಿದೆ.

ಈ ಮಾರುಕಟ್ಟೆಯ ತ್ಯಾಜ್ಯದಿಂದ ತಯಾರಾದ ವಿದ್ಯುತ್​​ನಿಂದ 100 ಬೀದಿದೀಪಗಳನ್ನ ಬೆಳಗಬಹುದಾಗಿದೆ. 150ಕ್ಕೂ ಹೆಚ್ಚು ಅಂಗಡಿಗಳು ಇದೇ ವಿದ್ಯುತ್​ನ್ನ ಪಡೆಯುತ್ತಿವೆ. ಇನ್ನು ಈ ತ್ಯಾಜ್ಯದಿಂದ ತಯಾರಾದ ಜೈವಿಕ ಇಂಧನಗಳನ್ನ ಮಾರ್ಕೆಟ್​​ನ ಕ್ಯಾಂಟಿನ್​​ಗೆ ಬಳಕೆ ಮಾಡಿಕೊಳ್ಳಲಾಗ್ತಿದೆ.

ಇನ್ನು ಈ ವಿಚಾರವಾಗಿ ಮಾತನಾಡಿದ ಬೋವೆನ್​ಪಲ್ಲಿ ಕಾಯದರ್ಶಿ ಶ್ರೀನಿವಾಸ್​, ತೆಲಂಗಾಣ ರಾಜ್ಯದಲ್ಲೇ ಈ ರೀತಿ ತ್ಯಾಜ್ಯದಿಂದ ಇಂಧನ ಉತ್ಪಾದನೆ ಮಾಡುತ್ತಿರುವ ಮೊದಲನೇ ಮಾರ್ಕೆಟ್​ ಇದಾಗಿದೆ. ಕೆಲ ತಿಂಗಳ ಹಿಂದಷ್ಟೇ ಈ ರೀತಿ ತ್ಯಾಜ್ಯದಿಂದ ಇಂಧನ ಉತ್ಪಾದಿಸುವ ಸಣ್ಣ ಪ್ರಯತ್ನವನ್ನ ಮಾಡಿದ್ವಿ. ಆದರೆ ಈ ಪ್ರಯತ್ನ ಎಷ್ಟರ ಮಟ್ಟಿಗೆ ಕ್ಲಿಕ್​ ಆಯ್ತು ಅಂದ್ರೆ ಇದೀಗ ವಿದ್ಯುತ್​ ಸ್ಥಾವರವನ್ನೇ ಸ್ಥಾಪಿಸಲಾಗಿದೆ ಅಂತದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...