ತರಕಾರಿ ಮಾರುಕಟ್ಟೆಗಳಲ್ಲಿ ತ್ಯಾಜ್ಯಗಳು ಕಾಣಸಿಗೋದು ಸರ್ವೇ ಸಾಮಾನ್ಯ, ಆದರೆ ಹೈದರಾಬಾದ್ನ ತರಕಾರಿ ಹಾಗೂ ಹಣ್ಣಿನ ಮಾರುಕಟ್ಟೆಯಲ್ಲಿ ಮಾತ್ರ ಈ ತ್ಯಾಜ್ಯಗಳನ್ನ ಬಳಕೆ ಮಾಡಿ ಇಂಧನ ಉತ್ಪಾದನೆ ಮಾಡುವ ವಿಶೇಷ ಕಾರ್ಯವನ್ನ ಮಾಡಲಾಗಿದೆ.
ಬೋವೆನ್ಪಲ್ಲಿ ಮಾರ್ಕೆಟ್ನಲ್ಲಿ ಮೊದಲು ಎಲ್ಲಿ ನೋಡಿದ್ರೂ ಹಣ್ಣು, ತರಕಾರಿ ಸಿಪ್ಪೆ, ಸೊಪ್ಪು ಹೀಗೆ ಹಸಿ ತ್ಯಾಜ್ಯಗಳ ರಾಶಿಯೇ ಇರ್ತಿತ್ತು. ಆದರೆ ಇದೀಗ ಈ ಮಾರುಕಟ್ಟೆಯ ಸಣ್ಣ ಕಸವನ್ನೂ ಬಿಡದೇ ಎಲ್ಲವನ್ನೂ ಬಳಸಿ ಅದರಿಂದ 500 ಯುನಿಟ್ ವಿದ್ಯುತ್ ಹಾಗೂ 30 ಕೆಜಿ ಜೈವಿಕ ಇಂಧನವನ್ನ ಉತ್ಪಾದನೆ ಮಾಡಲಾಗ್ತಿದೆ.
ಈ ಮಾರುಕಟ್ಟೆಯ ತ್ಯಾಜ್ಯದಿಂದ ತಯಾರಾದ ವಿದ್ಯುತ್ನಿಂದ 100 ಬೀದಿದೀಪಗಳನ್ನ ಬೆಳಗಬಹುದಾಗಿದೆ. 150ಕ್ಕೂ ಹೆಚ್ಚು ಅಂಗಡಿಗಳು ಇದೇ ವಿದ್ಯುತ್ನ್ನ ಪಡೆಯುತ್ತಿವೆ. ಇನ್ನು ಈ ತ್ಯಾಜ್ಯದಿಂದ ತಯಾರಾದ ಜೈವಿಕ ಇಂಧನಗಳನ್ನ ಮಾರ್ಕೆಟ್ನ ಕ್ಯಾಂಟಿನ್ಗೆ ಬಳಕೆ ಮಾಡಿಕೊಳ್ಳಲಾಗ್ತಿದೆ.
ಇನ್ನು ಈ ವಿಚಾರವಾಗಿ ಮಾತನಾಡಿದ ಬೋವೆನ್ಪಲ್ಲಿ ಕಾಯದರ್ಶಿ ಶ್ರೀನಿವಾಸ್, ತೆಲಂಗಾಣ ರಾಜ್ಯದಲ್ಲೇ ಈ ರೀತಿ ತ್ಯಾಜ್ಯದಿಂದ ಇಂಧನ ಉತ್ಪಾದನೆ ಮಾಡುತ್ತಿರುವ ಮೊದಲನೇ ಮಾರ್ಕೆಟ್ ಇದಾಗಿದೆ. ಕೆಲ ತಿಂಗಳ ಹಿಂದಷ್ಟೇ ಈ ರೀತಿ ತ್ಯಾಜ್ಯದಿಂದ ಇಂಧನ ಉತ್ಪಾದಿಸುವ ಸಣ್ಣ ಪ್ರಯತ್ನವನ್ನ ಮಾಡಿದ್ವಿ. ಆದರೆ ಈ ಪ್ರಯತ್ನ ಎಷ್ಟರ ಮಟ್ಟಿಗೆ ಕ್ಲಿಕ್ ಆಯ್ತು ಅಂದ್ರೆ ಇದೀಗ ವಿದ್ಯುತ್ ಸ್ಥಾವರವನ್ನೇ ಸ್ಥಾಪಿಸಲಾಗಿದೆ ಅಂತದ್ರು.