1. ವೈದ್ಯಕೀಯ ಅಧಿಕಾರಿಯ ಬಳಿ ಸೋಂಕಿತ ಸೌಮ್ಯ ಇಲ್ಲ ಲಕ್ಷಣವೇ ಇಲ್ಲದಿರುವ ಬಗ್ಗೆ ದೃಢೀಕರಣ ಪಡೆಯಬೇಕು.
2. ಐಸೋಲೇಷನ್ಗೆ ಒಳಗಾಗಲು ನಿವಾಸದಲ್ಲಿ ಪ್ರತ್ಯೇಕ ಕೋಣೆ ಸೇರಿದಂತೆ ಅಗತ್ಯ ಸೌಲಭ್ಯ ಹೊಂದಿರಬೇಕು.
3. 24 ಗಂಟೆಯೂ ರೋಗಿಯ ಕಾಳಜಿ ಮಾಡಲು ಯಾರಾದರೂ ಇರಬೇಕು. ಹೋಮ್ ಐಸೋಲೇಷನ್ನಲ್ಲಿ ಇರುವ ವೇಳೆ ಕೆಲ ಮಾನದಂಡಗಳನ್ನ ಪಾಲಿಸಬೇಕು.
4. 60 ವರ್ಷ ಮೇಲ್ಪಟ್ಟ ವೃದ್ಧರು ಹಾಗೂ ರಕ್ತದೊತ್ತಡ, ಮಧುಮೇಹ, ಹೃದಯ ಸಂಬಂಧಿ ಕಾಯಿಲೆ, ಶ್ವಾಸಕೋಶ, ಲಿವರ್, ಕಿಡ್ನಿ ಸಮಸ್ಯೆ ಹೊಂದಿರುವವರು ಸರಿಯಾಗಿ ವೈದ್ಯಾಧಿಕಾರಿಯ ನಿಗಾದಲ್ಲಿರಬೇಕು.
5 . ಹೆಚ್ಐವಿ ಹಾಗೂ ಕ್ಯಾನ್ಸರ್ ಚಿಕಿತ್ಸೆಗೆ ಒಳಗಾಗಿರುವ ಸೋಂಕಿತರಿಗೆ ಹೋಮ್ ಐಸೋಲೇಷನ್ನಲ್ಲಿ ಇರಲು ಅವಕಾಶವಿಲ್ಲ. ವೈದ್ಯರಿಂದ ಸೂಕ್ತ ಚಿಕಿತ್ಸೆ ಸಿಗಲಿದೆ ಎಂದು ದೃಢವಿದ್ದರೆ ಮಾತ್ರ ಐಸೋಲೇಷನ್ ಆಯ್ಕೆ ನೀಡಬಹುದು.
6. ವೈದ್ಯಾಧಿಕಾರಿಯ ಸೂಚನೆಯಂತೆ ಸೋಂಕಿತರ ಕಾಳಜಿ ವಹಿಸುವವರು ಹಾಗೂ ಪ್ರಾಥಮಿಕ ಸಂಪರ್ಕದಲ್ಲಿ ಇರುವವರು ಹೈಡ್ರೋಕ್ಸಿಕ್ಲೋರೋಕ್ವಿನ್ ಪ್ರೊಪೈಲ್ಯಾಕ್ಸಿಸ್ ಸೇವಿಸಬೇಕು.
ಡೇಟಿಂಗ್ ಆಪ್ನಲ್ಲಿ ಸಂಗಾತಿ ಹುಡುಕುತ್ತಿದ್ದೀರಾ….? ಹಾಗಾದ್ರೆ ʼಲಸಿಕೆʼ ಸ್ವೀಕರಿಸುವುದು ಅನಿವಾರ್ಯ
ರೋಗಿಗಳಿಗೆ ಇರುವ ಮಾರ್ಗಸೂಚಿ :
1. ಸೋಂಕಿತ ವ್ಯಕ್ತಿ ಮನೆಯವರಿಂದ ಪ್ರತ್ಯೇಕವಾಗಿ ಇರಬೇಕು. ಅದರಲ್ಲೂ ಮನೆಯಲ್ಲಿ ರಕ್ತದೊತ್ತಡ ಸೇರಿದಂತೆ ವಿವಿಧ ಗಂಭೀರ ಕಾಯಿಲೆ ಇರುವ ವೃದ್ಧರ ಜೊತೆ ಸಂಪರ್ಕದಲ್ಲಿ ಇರುವಂತೆಯೇ ಇಲ್ಲ.
2. ಸರಿಯಾಗಿ ಗಾಳಿಯಾಡುವಂತಹ ಕೋಣೆಯಲ್ಲಿಯೇ ಸೋಂಕಿತರನ್ನ ಇಡಬೇಕು.
3. ಸೋಂಕಿತರು ಮೂರು ಲೇಯರ್ ಮೆಡಿಕಲ್ ಮಾಸ್ಕ್ಗಳನ್ನೇ ಧರಿಸಬೇಕು. 8 ಗಂಟೆಗಳಿಗೊಮ್ಮೆ ಮಾಸ್ಕ್ಗಳನ್ನ ಬದಲಾಯಿಸಬೇಕು. ಕಾಳಜಿ ತೆಗೆದುಕೊಳ್ಳುವವರು ಸಹ ಕೋಣೆಗೆ ಬರುವ ಮುನ್ನ ಎನ್ 95 ಮಾಸ್ಕ್ ಧರಿಸಬೇಕು.
4. 1 ಪರ್ಸೆಂಟ್ ಸೋಡಿಯಂ ಹೈಪೋಕ್ಲೋರೈಟ್ನಿಂದ ಮಾಸ್ಕ್ಗಳನ್ನ ಸೋಂಕು ರಹಿತ ಮಾಡಿ ಬಳಿಕ ಅದನ್ನು ನಾಶ ಮಾಡಬೇಕು.
5. ರೋಗಿಗಳು ವಿಶ್ರಾಂತಿ ಪಡೆಯುತ್ತಿರಬೇಕು ಹಾಗೂ ದ್ರಾವಣ ಹೆಚ್ಚಿರುವ ಆಹಾರ ಸೇವಿಸಬೇಕು.
6. ಎಲ್ಲಾ ಸಮಯದಲ್ಲೂ ಉಸಿರಾಟದ ಶಿಷ್ಟಾಚಾರಗಳನ್ನ ಪಾಲಿಸಬೇಕು.
7. 40 ಸೆಕೆಂಡ್ಗಳ ಕಾಲ ಸೋಪು ಇಲ್ಲವೇ ಆಲ್ಕೋಹಾಲ್ ಇರುವ ಸ್ಯಾನಿಟೈಸರ್ಗಳಿಂದ ಕೈ ತೊಳೆದುಕೊಳ್ಳಿ.
8. ಸೋಂಕಿತರು ತಮ್ಮ ವೈಯಕ್ತಿಕ ವಸ್ತುಗಳನ್ನ ಇನ್ನೊಬ್ಬರ ಜೊತೆ ಹಂಚಿಕೊಳ್ಳುವಂತಿಲ್ಲ.
9. 1 ಪರ್ಸೆಂಟ್ ಹೈಪೋಕ್ಲೋರೈಟ್ ಸೊಲ್ಯೂಷನ್ನಿಂದ ಕೋಣೆಯ ಪ್ರತಿಯೊಂದು ಮೂಲೆಯನ್ನ ಸ್ವಚ್ಛ ಮಾಡಬೇಕು.
10. ಆಕ್ಸಿಮೀಟರ್ನ ಸಹಾಯದಿಂದ ಆಗಾಗ ಆಮ್ಲಜನಕ ಮಟ್ಟವನ್ನ ಪರೀಕ್ಷೆ ಮಾಡುತ್ತಿರಬೇಕು.
11. ಸೋಂಕಿತ ವ್ಯಕ್ತಿ ಪ್ರತಿ ದಿನ ದೇಹದ ತಾಪಮಾನವನ್ನ ಪರೀಕ್ಷೆ ಮಾಡಿಕೊಳ್ಳಬೇಕು.
ಆಸ್ಪತ್ರೆಗೆ ದಾಖಲಾಗೋದು ಯಾವಾಗ :
1. ಉಸಿರಾಟದ ತೊಂದರೆ.
2. ಆಮ್ಲಜನಕ ಮಟ್ಟ ಇಳಿಕೆಯಾಗುವುದು.
3. ಎದೆಯಲ್ಲಿ ನೋವು ಕಾಣಿಸಿಕೊಂಡಾಗ.
4. ಮಾನಸಿಕವಾಗಿ ಆರೋಗ್ಯ ಹದಗೆಡುತ್ತಿದೆ ಎನಿಸಿದಾಗ.