ವಿವಾಹದಂತಹ ಸೂಪರ್ ಸ್ಪ್ರೆಡರ್ ಕಾರ್ಯಕ್ರಮಗಳು ದೇಶದಲ್ಲಿ ಕೊರೊನಾ ಸೋಂಕಿನ ಸಂಖ್ಯೆ ಏರಿಕೆಯಾಗಲು ಮುಖ್ಯ ಕಾರಣವಾಗಿದೆ. ದೇಶದಲ್ಲಿ ಕೊರೊನಾ ಪ್ರಕರಣಗಳು ಕಡಿಮೆಯಾಗುತ್ತಿದ್ದ ವೇಳೆಯಲ್ಲಿ ಜನರು ಅಜಾಗರೂಕತೆ ವಹಿಸಿರೋದೇ ಈಗಿನ ಕೊರೊನಾ ಕೇಸ್ ಹೆಚ್ಚಳಕ್ಕೆ ಕಾರಣ ಎಂದು ಕೇಂದ್ರ ಸರ್ಕಾರ ಪ್ರಾಥಮಿಕ ಮೌಲ್ಯಮಾಪನದ ಮೂಲಕ ಹೇಳಿದೆ.
ಸೂಪರ್ ಸ್ಪ್ರೆಡರ್ನಂತಹ ಕಾರ್ಯಕ್ರಮಗಳನ್ನ ನೋಡುತ್ತಿದ್ದರೆ ಜನರ ಅಜಾಗರೂಕತೆ ಎದ್ದು ತೋರುತ್ತಿದೆ. ವಿಶೇಷವಾಗಿ ಹಳ್ಳಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಒಂದೆಡೆ ಸೇರುತ್ತಿದ್ದಾರೆ. ಆದರೆ ಈ ರೀತಿಯ ಜನಸಂದಣಿಯನ್ನ ನಾವು ಕಡಿಮೆ ಮಾಡಲೇಬೇಕಿದೆ. ಎಂದು ನೀತಿ ಆಯೋಗ್ಯದ ಆರೋಗ್ಯ ಇಲಾಖೆ ಸದಸ್ಯ ಡಾ. ವಿ.ಕೆ. ಪಾಲ್ ಹೇಳಿದ್ದಾರೆ.
BIG NEWS: ಕೊರೊನಾ ಅಟ್ಟಹಾಸ – ಒಂದೇ ದಿನದಲ್ಲಿ 40 ಸಾವಿರಕ್ಕೂ ಹೆಚ್ಚು ಜನರಲ್ಲಿ ಕೊರೊನಾ ಸೋಂಕು ಪತ್ತೆ
ಭಾರತದಲ್ಲಿ ಶುಕ್ರವಾರ 40 ಸಾವಿರ ಹೊಸ ಕೊರೊನಾ ಕೇಸ್ ದಾಖಲಾಗಿದೆ. ಈ ಮೂಲಕ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,15,14,331ರಷ್ಟಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ನಾವು ಈಗ ಕೊರೊನಾ ಎರಡನೇ ಅಲೆಯ ಮಧ್ಯ ಸ್ಥಿತಿಯಲ್ಲಿ ಇದ್ದೇವೆ. ಸರಿಯಾದ ಮುಂಜಾಗ್ರತಾ ಕ್ರಮ ಕೈಗೊಳ್ಳದೇ ಹೋದಲ್ಲಿ ಇನ್ನೊಂದು 6 ರಿಂದ 8 ದಿನಗಳಲ್ಲಿ 1,00,000 ಹೊಸ ಕೇಸ್ಗಳು ದಾಖಲಾಗೋದು ಪಕ್ಕಾ ಎಂದು ಡಾ. ಎನ್.ಕೆ. ಅರೋರಾ ಎಚ್ಚರಿಕೆ ನೀಡಿದ್ದಾರೆ.