ಮಹಾರಾಷ್ಟ್ರ ಸರ್ಕಾರ ನನ್ನನ್ನ ಜೈಲಿನಲ್ಲಿ ಇರಿಸಲು ಯತ್ನಿಸುತ್ತಿದೆ ಅಂತಾ ಬಾಲಿವುಡ್ ನಟಿ ಕಂಗನಾ ರಣಾವತ್ ಆರೋಪಿಸಿದ್ದಾರೆ. ಟ್ವಿಟರ್ ಪೋಸ್ಟ್ಗಳ ಮೂಲಕ ಕೋಮು ಗಲಭೆ ಸೃಷ್ಟಿಸ್ತಾ ಇದ್ದಾರೆ ಎಂಬ ಆರೋಪದಡಿ ಕಂಗನಾ ಸಹೋದರಿಯರ ವಿರುದ್ಧ ಪ್ರಕರಣ ದಾಖಲಿಸುವಂತೆ ಮುಂಬೈ ಕೋರ್ಟ್ ಸೂಚನೆ ನೀಡಿತ್ತು.
ನಾನು ಸಾರ್ವಕರ್, ಸುಭಾಷ್ ಚಂದ್ರ ಬೋಸ್ ಹಾಗೂ ಝಾನ್ಸಿ ರಾಣಿ ಲಕ್ಷ್ಮೀ ಬಾಯಿಯನ್ನ ಆರಾಧಿಸುತ್ತೇನೆ. ಇದೀಗ ಮಹಾರಾಷ್ಟ್ರ ಸರ್ಕಾರ ನನ್ನನ್ನ ಜೈಲಿಗಟ್ಟಲು ಯತ್ನಿಸೋ ಮೂಲಕ ನನಗೆ ಇನ್ನಷ್ಟು ಬಲವನ್ನ ತುಂಬುತ್ತಿದೆ. ಹೀಗಾಗಿ ನಾನು ಜೈಲಿಗೆ ಹೋಗಲು ಕಾಯುತ್ತಿದ್ದೇನೆ. ಇದು ನನ್ನ ಜೀವನದ ಹೋರಾಟಕ್ಕೆ ಹೊಸ ಅರ್ಥವನ್ನ ನೀಡಲಿದೆ . ಜೈ ಹಿಂದ್ ಅಂತಾ ಟ್ವೀಟಾಯಿಸಿದ್ದಾರೆ.
ಟ್ವಿಟರ್ ಮೂಲಕ ಕಂಗನಾ ಸಮಾಜದಲ್ಲಿ ಶಾಂತಿ ಕದಡುವ ಕೆಲಸ ಮಾಡ್ತಿದ್ದಾರೆ ಅಂತಾ ಆರೋಪಿಸಿ ವಕೀಲ ಅಜಿ ಕಾಷಿಫ್ ಖಾನ್ ದೇಶಮುಖ್ ಕೋರ್ಟ್ ಮೆಟ್ಟಿಲೇರಿದ್ದರು.
ಇನ್ನು ಇದರ ಜೊತೆಯಲ್ಲಿ ಮತ್ತೊಂದು ಟ್ವೀಟ್ ಮಾಡಿರೋ ಕಂಗನಾ ರಣಾವತ್ ಬಾಲಿವುಡ್ ನಟ ಆಮೀರ್ ಖಾನ್ರನ್ನ ಟ್ಯಾಗ್ ಮಾಡಿದ್ದಾರೆ. ಝಾನ್ಸಿ ರಾಣಿ ಲಕ್ಷ್ಮೀಬಾಯಿ ಕೋಟೆಯನ್ನ ಮುರಿದು ಹಾಕಿದಂತೆ ನನ್ನ ಮನೆಯನ್ನೂ ಧ್ವಂಸ ಮಾಡಿದ್ದಾರೆ, ಸಾರ್ವಕರ್ನ್ನ ಜೈಲಿನಲ್ಲಿ ಇಟ್ಟಂತೆ ನನ್ನನ್ನೂ ಜೈಲಿನಲ್ಲಿ ಇಡೋಕೆ ಪ್ರಯತ್ನಿಸ್ತಾ ಇದ್ದಾರೆ ಅಂತಾ ಬರೆದುಕೊಂಡಿದ್ದಾರೆ.