alex Certify ಬದಲಾಗಲಿದೆ ನಿಯಮ: ವಿಮಾನ ಪ್ರಯಾಣದ ವೇಳೆ ಸಿಗಲಿದೆ ಆಹಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬದಲಾಗಲಿದೆ ನಿಯಮ: ವಿಮಾನ ಪ್ರಯಾಣದ ವೇಳೆ ಸಿಗಲಿದೆ ಆಹಾರ

ನಾಗರಿಕ ವಿಮಾನಯಾನ ಸಚಿವಾಲಯವು ದೇಶೀಯ ಮತ್ತು ಅಂತರರಾಷ್ಟ್ರೀಯ ವಿಮಾನಯಾನಕ್ಕಾಗಿ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ ಬದಲಾಯಿಸಿದೆ. ವಿಮಾನಯಾನ ಕಂಪನಿಗಳಿಗೆ ಆಹಾರ ಪೂರೈಸಲು ಅವಕಾಶ ಮಾಡಿಕೊಟ್ಟಿದೆ. ವಿಮಾನಯಾನ ನೀತಿಯ ಪ್ರಕಾರ ಪ್ರಯಾಣಿಕರಿಗೆ ಈಗ ಪೂರ್ವ ಪ್ಯಾಕೇಜ್ ಮಾಡಿದ ಆಹಾರ, ತಿಂಡಿ ಮತ್ತು ಪಾನೀಯಗಳನ್ನು ನೀಡಬಹುದು.

ಬಿಸಾಡಬಹುದಾದ ಪ್ಲೇಟ್, ಲೋಟಗಳನ್ನು ಬಳಸುವಂತೆ ವಿಮಾನಯಾನ ಸಂಸ್ಥೆಗಳಿಗೆ ಸೂಚಿಸಿದೆ. ಯಾವುದೇ ಕಾರಣಕ್ಕೂ ಮರುಬಳಕೆ ವಸ್ತುಗಳನ್ನು ಬಳಸದಂತೆ ಸರ್ಕಾರ ಸೂಚಿಸಿದೆ.

ಸಿಬ್ಬಂದಿ ಪ್ರತಿ ಮೈಲಿಗೆ ಹ್ಯಾಂಡ್ ಗ್ಲೋಸ್ ಬದಲಿಸಬೇಕೆಂದು ಸರ್ಕಾರ ಸೂಚಿಸಿದೆ. ದೇಶೀಯ ಮತ್ತು ಅಂತರರಾಷ್ಟ್ರೀಯ ವಿಮಾನದಲ್ಲಿ ಮನರಂಜನೆಗೂ ಒಪ್ಪಿಗೆ ನೀಡಿದೆ. ಬಿಸಾಡಬಹುದಾದ ಇಯರ್‌ಫೋನ್‌ಗಳನ್ನು ಬಳಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ಅಥವಾ ಪ್ರಯಾಣಿಕರಿಗೆ ಸ್ವಚ್ಛ  ಮತ್ತು ಸೋಂಕು ರಹಿತ ಇಯರ್‌ಫೋನ್‌ಗಳನ್ನು ಒದಗಿಸುವಂತೆ ಸರ್ಕಾರವು ವಿಮಾನಯಾನ ಸಂಸ್ಥೆಗಳನ್ನು ಕೇಳಿದೆ.

ಮೇ 25 ರಂದು ದೇಶೀಯ ವಿಮಾನಗಳು ಪುನರಾರಂಭಗೊಂಡಾಗ, ಸರ್ಕಾರವು ಆಹಾರ ಮತ್ತು ಪಾನೀಯ ಸೇವೆಗಳ ಜೊತೆಗೆ ಮನರಂಜನೆಯನ್ನು ನಿಷೇಧಿಸಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...