
ಅಮೆರಿಕವನ್ನ ಹೊರತುಪಡಿಸಿದ್ರೆ ಭಾರತದಲ್ಲಿ ಅತಿ ಹೆಚ್ಚು ಕೊರೊನಾ ಸೋಂಕಿತರಿದ್ದಾರೆ. ಮೊದಲ ಹಂತದ ಕೊರೊನಾ ಲಸಿಕೆ ವಿತರಣಾ ಕಾರ್ಯಕ್ರಮ ಪೂರ್ಣವಾಗೋಕೆ ಇನ್ನೂ ಹಲವು ದಿನ ಬಾಕಿ ಇದೆ. ಹೀಗಾಗಿ ಸಾಮಾಜಿಕ ಅಂತರ ಹಾಗೂ ಮಾಸ್ಕ್ಗಳೇ ಜೀವ ಸಂಜೀವಿನಿಗಳಾಗಿವೆ.
ಗೋರಕ್ಪುರ ಪೊಲೀಸರು ಆರೋಪಿಯನ್ನ ಸೆರೆ ಹಿಡಿದ ಬಗ್ಗೆ ಮಾಹಿತಿಯನ್ನ ನೀಡಲು ಟ್ವಿಟರ್ನಲ್ಲಿ ಪೇದೆ ಹಾಗೂ ಆರೋಪಿಯ ಫೋಟೋವನ್ನ ಶೇರ್ ಮಾಡಿದ್ದರು. ಅಸಲಿಗೆ ಇವರಿಬ್ಬರೂ ಮಾಸ್ಕ್ ಧರಿಸಿರಲಿಲ್ಲ. ಆದರೆ ಫೋಟೋಶಾಪ್ ಮೂಲಕ ಇಬ್ಬರ ಮುಖಕ್ಕೆ ಮಾಸ್ಕ್ ಅಳವಡಿಸಲಾಗಿತ್ತು. ಇದನ್ನ ಕಂಡು ಹಿಡಿದ ಟ್ವೀಟಿಗರು ಟ್ರೋಲ್ ಮೇಲೆ ಟ್ರೋಲ್ ಮಾಡುತ್ತಿದ್ದಾರೆ.