ಕೊರೊನಾ ವೈರಸ್ ನಿಂದ ರಕ್ಷಿಸಿಕೊಳ್ಳಲು ಎಲ್ಲೆಡೆ ಮಾಸ್ಕ್ ಧರಿಸುವುದು ಸಾಮಾನ್ಯವಾಗಿಬಿಟ್ಟಿದೆ. ಈ ಮಾಸ್ಕ್ ಗಳಲ್ಲೂ ಥರಾವರಿ ಡಿಸೈನ್‌ಗಳನ್ನು ಮಾಡಿಸಿ ಹಾಕಿಕೊಳ್ಳುವುದು ಒಂಥರಾ ಟ್ರೆಂಡ್.
ಸಂಪೂರ್ಣ ಚಿನ್ನದಿಂದ ಮಾಡಲಾದ ಮಾಸ್ಕ್ ಧರಿಸಿದ ಪುಣೆಯ ವ್ಯಕ್ತಿಯೊಬ್ಬ ನೆಟ್‌ನಲ್ಲಿ ಭಾರೀ ಸದ್ದು ಮಾಡಿದ ಬೆನ್ನಿಗೇ ಒಡಿಶಾದ ವ್ಯಕ್ತಿಯೊಬ್ಬರು ಇದೇ ಹಾದಿ ತುಳಿದಿದ್ದಾರೆ.
ಕಟಕ್‌ನ ಅಲೋಕ್ ಮೊಹಾಂತಿ ಎಂಬುವವರು ಖುದ್ದು ಮುಂಬೈನ ಝಾವೇರಿ ಬಜಾರ್ ನಿಂದ ಚಿನ್ನದಿಂದ ಮಾಡಲಾದ ಮಾಸ್ಕ್ ಅನ್ನು ತರಿಸಿಕೊಂಡಿದ್ದಾರೆ. 3.5 ಲಕ್ಷ ರೂ. ವೆಚ್ಚದಲ್ಲಿ ತಯಾರಿಸಲಾದ ಈ ಮಾಸ್ಕ್‌ನಲ್ಲಿ 90-100 ಗ್ರಾಂ ಚಿನ್ನವಿದ್ದು, 22 ದಿನಗಳ ಕಾಲ ವರ್ಕ್ ಮಾಡಲಾಗಿದೆ. ಇದರ ನಡುವೆ ಸಣ್ಣ ರಂಧ್ರಗಳಿದ್ದು ಉಸಿರಾಡಲು ಗಾಳಿ ಒಳಗೆ ಎಳೆದುಕೊಳ್ಳಬಹುದಾಗಿದೆ.