ಭಕ್ತರು ದೇವರನ್ನು ವಿಶೇಷ ರೀತಿಯಲ್ಲಿ ಅಲಂಕರಿಸಿ ಸಂಭ್ರಮಿಸುವುದು ಪರಂಪರೆ. ತೆಲಂಗಾಣದ ಕನ್ಯಕಾಪರಮೇಶ್ವರಿ ದೇವಸ್ಥಾನದಲ್ಲಿ ದೇವರ ಮೂರ್ತಿಯನ್ನು 1.11 ಕೋಟಿ ರೂ. ಕರೆನ್ಸಿಯಲ್ಲಿ ಅಲಂಕರಿಸಿ ಪೂಜಿಸಿ ಗಮನ ಸೆಳೆಯುವಂತೆ ಮಾಡಿದ್ದಾರೆ.
ಗಡ್ವಾಲ್ ಜಿಲ್ಲೆ ಜೋಗುಲಾಂಬದಲ್ಲಿರುವ ದೇವಸ್ಥಾನದಲ್ಲಿ ದಸರಾ ಹಬ್ಬದ ಸಂದರ್ಭದಲ್ಲಿ ದೇವಿಯನ್ನು ವಿವಿಧ ಬಣ್ಣಗಳ ಕರೆನ್ಸಿ ಗಳಿಂದ ಮಾಡಿದ ಹೂವುಗಳ ಹೂಮಾಲೆಯಿಂದ ಅಲಂಕರಿಸಲಾಗಿತ್ತು.
ಆರ್ಯವೈಶ್ಯ ಸಂಘದ ಆಶ್ರಯದಲ್ಲಿ ನಡೆದ ನವರಾತ್ರಿ ಸಂದರ್ಭದಲ್ಲಿ ಈ ಧನಲಕ್ಷ್ಮಿ ಅವತಾರವನ್ನು ಸಾವಿರಾರು ಭಕ್ತರು ಪೂಜಿಸಿದರು. ಜನರಿಂದಲೇ ಸಂಗ್ರಹಿಸಿದ ಹಣದಿಂದ ಅಲಂಕಾರ ಮಾಡಿ ನಂತರ ಹಣವನ್ನು ಅವರಿಗೆ ಹಿಂತಿರುಗಿಸಲಾಗುವ ವಾಡಿಕೆ ಇಲ್ಲಿದೆ. ಈ ಬಾರಿ 50 ಭಕ್ತರು ಅಲಂಕಾರಕ್ಕೆ ಹಣವನ್ನು ನೀಡಿದ್ದರು.