ಫೇಸ್ ಮಾಸ್ಕ್ ಧರಿಸಲು ನಿರಾಕರಿಸಿ ನಾಗರಿಕ ಇಲಾಖೆ ಸಿಬ್ಬಂದಿ ಜೊತೆ ವಾದಕ್ಕೆ ಇಳಿಯುವ ಪ್ರವಾಸಿಗರ ಫೋಟೋ ತೆಗೆದು ದಂಡ ವಿಧಿಸಲಾಗುವುದು ಅಂತಾ ಪಣಜಿ ಮೇಯರ್ ಉದಯ್ ಮಾಡ್ಕೈಕರ್ ಹೇಳಿದ್ದಾರೆ.
ಅನೇಕ ಪ್ರವಾಸಿಗರು ಕೊರೊನಾ ನಿಯಮಾವಳಿಗಳನ್ನ ಉಲ್ಲಂಘಿಸಿದ್ದು ಮಾತ್ರವಲ್ಲದೇ ಪಣಜಿ ಕಾರ್ಪೋರೇಷನ್ ಸಿಬ್ಬಂದಿಯನ್ನ ತರಾಟೆಗೆ ತೆಗೆದುಕೊಂಡ ಅನೇಕ ದೂರುಗಳು ಕೇಳಿಬಂದಿವೆ. ಹೀಗಾಗಿ ಇಂತಹ ಪ್ರವಾಸಿಗರಿಗೆ ಛಾಟಿ ಬೀಸುವ ಸಲುವಾಗಿ ಈ ನಿರ್ಧಾರ ಕೈಗೊಂಡಿದ್ದೇವೆ ಎಂದೂ ಅವರು ಹೇಳಿದ್ರು.
ಜನರಿಗೆ ಕಿರುಕುಳ ಕೊಡೋದು ನಮ್ಮ ಉದ್ದೇಶವಲ್ಲ. ಆದರೆ ಕೆಲ ಪ್ರವಾಸಿಗರು ಸುಮ್ಮನೇ ಕಿರಿಕ್ ಮಾಡುತ್ತಾರೆ. ಗೋವಾಕ್ಕೆ ಪ್ರವಾಸಿಗರು ಬರುತ್ತಲೇ ಇರ್ತಾರೆ. ಹಾಗಂತ ನಮ್ಮ ರಾಜ್ಯದ ಜನರನ್ನ ತರಾಟೆಗೆ ತೆಗೆದುಕೊಂಡರೆ ನಾವು ಸುಮ್ಮನಿರಲ್ಲ. ಮಾಸ್ಕ್ ಧರಿಸೋದು ಕಡ್ಡಾಯ. ಇದನ್ನ ಪಾಲಿಸದೇ ಹೋದಲ್ಲಿ ದಂಡ ಪಕ್ಕಾ ಎಂದು ಹೇಳಿದ್ರು.