alex Certify ಪಣಜಿಗೆ ಹೋಗುವ ಪ್ರವಾಸಿಗರಿಗೆ ಇದು ತಿಳಿದಿರಲಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಣಜಿಗೆ ಹೋಗುವ ಪ್ರವಾಸಿಗರಿಗೆ ಇದು ತಿಳಿದಿರಲಿ…!

ಫೇಸ್​​ ಮಾಸ್ಕ್​ ಧರಿಸಲು ನಿರಾಕರಿಸಿ ನಾಗರಿಕ ಇಲಾಖೆ ಸಿಬ್ಬಂದಿ ಜೊತೆ ವಾದಕ್ಕೆ ಇಳಿಯುವ ಪ್ರವಾಸಿಗರ ಫೋಟೋ ತೆಗೆದು ದಂಡ ವಿಧಿಸಲಾಗುವುದು ಅಂತಾ ಪಣಜಿ ಮೇಯರ್​​ ಉದಯ್​​ ಮಾಡ್ಕೈಕರ್​ ಹೇಳಿದ್ದಾರೆ.

ಅನೇಕ ಪ್ರವಾಸಿಗರು ಕೊರೊನಾ ನಿಯಮಾವಳಿಗಳನ್ನ ಉಲ್ಲಂಘಿಸಿದ್ದು ಮಾತ್ರವಲ್ಲದೇ ಪಣಜಿ ಕಾರ್ಪೋರೇಷನ್​ ಸಿಬ್ಬಂದಿಯನ್ನ ತರಾಟೆಗೆ ತೆಗೆದುಕೊಂಡ ಅನೇಕ ದೂರುಗಳು ಕೇಳಿಬಂದಿವೆ. ಹೀಗಾಗಿ ಇಂತಹ ಪ್ರವಾಸಿಗರಿಗೆ ಛಾಟಿ ಬೀಸುವ ಸಲುವಾಗಿ ಈ ನಿರ್ಧಾರ ಕೈಗೊಂಡಿದ್ದೇವೆ ಎಂದೂ ಅವರು ಹೇಳಿದ್ರು.

ಜನರಿಗೆ ಕಿರುಕುಳ ಕೊಡೋದು ನಮ್ಮ ಉದ್ದೇಶವಲ್ಲ. ಆದರೆ ಕೆಲ ಪ್ರವಾಸಿಗರು ಸುಮ್ಮನೇ ಕಿರಿಕ್​ ಮಾಡುತ್ತಾರೆ. ಗೋವಾಕ್ಕೆ ಪ್ರವಾಸಿಗರು ಬರುತ್ತಲೇ ಇರ್ತಾರೆ. ಹಾಗಂತ ನಮ್ಮ ರಾಜ್ಯದ ಜನರನ್ನ ತರಾಟೆಗೆ ತೆಗೆದುಕೊಂಡರೆ ನಾವು ಸುಮ್ಮನಿರಲ್ಲ. ಮಾಸ್ಕ್​ ಧರಿಸೋದು ಕಡ್ಡಾಯ. ಇದನ್ನ ಪಾಲಿಸದೇ ಹೋದಲ್ಲಿ ದಂಡ ಪಕ್ಕಾ ಎಂದು ಹೇಳಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...