ದೇಶದ ಅತ್ಯಂತ ಕ್ರೂರ ಸಮಸ್ಯೆಗಳಲ್ಲಿ ಒಂದಾದ ಬಡತನವನ್ನು ಬಿಂಬಿಸುವ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಮಹಿಳೆಯೊಬ್ಬರು ತಮ್ಮ ಮಗುವನ್ನು ಕಂಕುಳದಲ್ಲಿ ಎತ್ತಿಕೊಂಡು ಮದುವೆ ಸಮಾರಂಭದ ಮೆರವಣಿಗೆಯಲ್ಲಿ ವರನಿಗೆ ಬೆಳಕು ಹಿಡಿಯುವ ಕೆಲಸ ಮಾಡುತ್ತಿರುವ ಮನಕಲಕುವ ಪರಿಸ್ಥಿತಿ ನೆಟ್ಟಿಗರನ್ನು ಬಹಳ ಕಾಡುತ್ತಿದೆ.
ಈ ಚಿತ್ರವನ್ನು ಶೇರ್ ಮಾಡಿಕೊಂಡಿರುವ ಉದ್ಯಮಿ ಹರ್ಷ ಗೋಯೆಂಕಾ ಈ ವಿಚಾರಕ್ಕೆ ಸಾಕಷ್ಟು ಟೀಕೆಗೆ ಗ್ರಾಸವಾಗಿದ್ದಾರೆ. ಬಡತನವನ್ನು ವೈಭವೀಕರಿಸುವ ಕೆಲಸವನ್ನು ಈ ಪೋಸ್ಟ್‌ನಲ್ಲಿ ಸಿರಿವಂತ ಉದ್ಯಮಿ ಗೋಯೆಂಕಾ ಮಾಡುತ್ತಿದ್ದಾರೆ ಎಂದು ನೆಟ್ಟಿಗರು ಟೀಕಿಸಿದ್ದಾರೆ.
ಬೆಂಗಳೂರಲ್ಲಿ ಕಿಡಿಗೇಡಿಗಳ ಅಟ್ಟಹಾಸ: 15 ಕಾರ್ ಗಳ ಗಾಜು ಜಖಂ
“ಆಕೆಯ ಧೈರ್ಯವನ್ನು ಮೆಚ್ಚಿಕೊಳ್ಳುವ ಬದಲಿಗೆ, ಆಕೆಗೆ ಇಂಥ ಪರಿಸ್ಥಿತಿ ಬಂದಿದೆಯಲ್ಲಾ ಎಂದು ನಮಗೆ ನಮ್ಮ ಮೇಲೇ ನಾಚಿಕೆಯಾಗುತ್ತಿದೆ” ಎಂದು ಟ್ವಿಟರ್ ಬಳಕೆದಾರರೊಬ್ಬರು ಈ ಟ್ವೀಟ್‌ಗೆ ಕಾಮೆಂಟ್ ಮಾಡಿದ್ದಾರೆ. “ಬಡತನದ ವೈಭವೀಕರಣ ಮಾಡುವುದನ್ನು ಬಿಡಿ…!” ಎಂದು ಮತ್ತೊಬ್ಬರು ಹೇಳಿದ್ದಾರೆ.
https://twitter.com/maulikshengal04/status/1373682572467732481?ref_src=twsrc%5Etfw%7Ctwcamp%5Etweetembed%7Ctwterm%5E1373682572467732481%7Ctwgr%5E%7Ctwcon%5Es1_&ref_url=https%3A%2F%2Fwww.ndtv.com%2Foffbeat%2Fglorifying-poverty-harsh-goenka-slammed-for-sharing-pic-of-mother-working-with-baby-2397287