alex Certify ಜಾಗತಿಕ ಹಸಿವು ಸೂಚ್ಯಾಂಕ: ಬೆಚ್ಚಿಬೀಳಿಸುವಂತಿದೆ ಭಾರತದ ಸ್ಥಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಾಗತಿಕ ಹಸಿವು ಸೂಚ್ಯಾಂಕ: ಬೆಚ್ಚಿಬೀಳಿಸುವಂತಿದೆ ಭಾರತದ ಸ್ಥಿತಿ

ಜಾಗತಿಕ ಹಸಿವು ಸೂಚ್ಯಾಂಕದಲ್ಲಿ ಭಾರತದ ಸ್ಥಾನ ಸ್ವಲ್ಪ ಚೇತರಿಕೆ ಕಂಡ್ರೂ ನೆರೆ ರಾಷ್ಟ್ರಗಳಿಗೆ ಹೋಲಿಸಿದ್ರೆ  ಭಾರತ ಹಿಂದಿದೆ. 107 ರಾಷ್ಟಗಳ ಪಟ್ಟಿಯಲ್ಲಿ ಭಾರತ 94ನೇ ಸ್ಥಾನದಲ್ಲಿದೆ. ವರದಿಯ ಪ್ರಕಾರ, ಭಾರತದಲ್ಲಿ ಹಸಿವಿನ ಮಟ್ಟ 27.2 ಅಂಕಗಳೊಂದಿಗೆ ಗಂಭೀರ ಸ್ಥಿತಿಯಲ್ಲಿದೆ. ಹಿಂದಿನ ವರ್ಷ 117 ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ 107ನೇ ಸ್ಥಾನದಲ್ಲಿತ್ತು.

ಸೂಚ್ಯಂಕದಲ್ಲಿ, ಭಾರತವು ನೇಪಾಳ 73ನೇ ಸ್ಥಾನ, ಪಾಕಿಸ್ತಾನ 88ನೇ ಸ್ಥಾನ, ಬಾಂಗ್ಲಾದೇಶ 75ನೇ ಸ್ಥಾನ, ಇಂಡೋನೇಷ್ಯಾ 70ನೇ ಸ್ಥಾನದಲ್ಲಿದೆ. ನೆರೆ ರಾಷ್ಟ್ರ ಪಾಕಿಸ್ತಾನ, ಬಾಂಗ್ಲಾ, ನೇಪಾಳಕ್ಕಿಂತಲೂ ಭಾರತದ ಸ್ಥಿತಿ ಕಳಪೆಯಾಗಿದೆ. ಒಟ್ಟು 107 ದೇಶಗಳಲ್ಲಿ ರುವಾಂಡಾ 97ನೇ ಸ್ಥಾನದಲ್ಲಿದೆ. ನೈಜೀರಿಯಾ 98ನೇ ಸ್ಥಾನದಲ್ಲಿದೆ. ಅಫ್ಘಾನಿಸ್ತಾನ 99ನೇ ಸ್ಥಾನದಲ್ಲಿದೆ. ಲೈಬೀರಿಯಾ 102ನೇ ಸ್ಥಾನದಲ್ಲಿದೆ. ಮೊಜಾಂಬಿಕ್ 103ನೇ ಸ್ಥಾನದಲ್ಲಿದೆ. ಚಾಡ್ 107ನೇ ಸ್ಥಾನದಲ್ಲಿದೆ.

ವರದಿಯ ಪ್ರಕಾರ, ಭಾರತದ ಜನಸಂಖ್ಯೆಯ ಶೇಕಡಾ 14 ರಷ್ಟು ಜನರು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಭಾರತವು 2015 ರಲ್ಲಿ 93 ನೇ ಸ್ಥಾನದಲ್ಲಿತ್ತು. 2016 ರಲ್ಲಿ 97 ನೇ ಸ್ಥಾನದಲ್ಲಿತ್ತು. 2017 ರಲ್ಲಿ 100 ನೇ ಸ್ಥಾನದಲ್ಲಿತ್ತು. 2018 ರಲ್ಲಿ 103 ನೇ ಸ್ಥಾನದಲ್ಲಿತ್ತು.

ಭಾರತೀಯ ಮಕ್ಕಳಲ್ಲಿ ಅಪೌಷ್ಟಿಕತೆ ಭಯಂಕರವಾಗಿದೆ. ಜಾಗತಿಕ ಹಸಿವು ಸೂಚ್ಯಂಕವನ್ನು, ದೇಶದಲ್ಲಿರುವ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳು, ಐದು ವರ್ಷದೊಳಗಿನ ಮಕ್ಕಳು, ಅವರ ತೂಕ ಅಥವಾ ಉದ್ದ, ವಯಸ್ಸು ಮತ್ತು ಐದು ವರ್ಷದೊಳಗಿನ ಮಕ್ಕಳಲ್ಲಿ ಮರಣ ಪ್ರಮಾಣಗಳ ಆಧಾರದ ಮೇಲೆ ರೂಪಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...