alex Certify ಮಾಸ್ಕ್​ ಧರಿಸಿದಾಗ ಕನ್ನಡಕ ಹಾಕಲು ಕಷ್ಟವಾಗ್ತಿದ್ಯಾ..? ಹಾಗಾದ್ರೆ ಹೀಗೆ ಮಾಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾಸ್ಕ್​ ಧರಿಸಿದಾಗ ಕನ್ನಡಕ ಹಾಕಲು ಕಷ್ಟವಾಗ್ತಿದ್ಯಾ..? ಹಾಗಾದ್ರೆ ಹೀಗೆ ಮಾಡಿ

ನೀವೇನಾದರೂ ಕನ್ನಡಕಧಾರಿಗಳಾಗಿದ್ರೆ ಮಾಸ್ಕ್​​ ಹಾಕಿಕೊಳ್ಳುವ ಕಷ್ಟ ನಿಮಗಿಂತ ಚೆನ್ನಾಗಿ ಇನ್ನೊಬ್ಬರಿಗೆ ತಿಳಿದಿರೋಕೆ ಸಾಧ್ಯವೇ ಇಲ್ಲ. ಮಾಸ್ಕ್​ ಹಾಕಿಕೊಳ್ಳದೇ ಇರೋ ಹಾಗಿಲ್ಲ. ಇತ್ತ ಮಂಜು ತುಂಬಿದ ಕನ್ನಡಕದಿಂದಾಗಿ ಸರಿಯಾಗಿ ನೋಡೋಕೂ ಆಗಲ್ಲ.

ಆದರೆ ವೈದ್ಯ ಡೇನಿಲ್​ ಎಂಬ ಹೈಫರ್​ ಮ್ಯಾನ್​ ಎಂಬವರು ಈ ಕನ್ನಡಕದ ಸಮಸ್ಯೆಗೆ ಪರಿಹಾರ ಕಂಡುಹಿಡಿದಿದ್ದಾರೆ. ಮೂಗಿಗೆ ಒಂದು ಬ್ಯಾಂಡೇಡ್​ ಹಾಕೋದ್ರಿಂದ ಈ ಸಮಸ್ಯೆಗೆ ಪರಿಹಾರ ಸಿಗುತ್ತೆ ಎಂದಿದ್ದಾರೆ.

ನೀವು ಕೂಡ ನನ್ನಂತೆ ಕನ್ನಡಕಧಾರಿಯಾಗಿದ್ದು ಮಾಸ್ಕ್​ ಧರಿಸೋಕೆ ಕಷ್ಟ ಪಡುತ್ತಿದ್ದರೆ ನನ್ನಲ್ಲಿ ಇದಕ್ಕೆ ಪರಿಹಾರ ಇದೆ. ಇದಕ್ಕಾಗಿ ನೀವು ಹೆಚ್ಚೇನು ಮಾಡಬೇಕಿಲ್ಲ. ನಿಮ್ಮ ಮೂಗಿಗೆ ಒಂದು ಬ್ಯಾಂಡೇಡ್​ ಹಾಕಿಬಿಡಿ. ಇದರಿಂದ ನಿಮ್ಮ ಮೂಗಿಗೆ ಕಿರಿಕಿರಿ ಎನಿಸುತ್ತೆ ಎಂದರೆ ನೀವು ಮಾಸ್ಕ್​ ಹಾಗೂ ಮೂಗಿನ ಮಧ್ಯ ಹತ್ತಿಯನ್ನಿಟ್ಟು ಬಳಿಕ ಬ್ಯಾಂಡೆಡ್​ ಹಾಕಿದ್ರೂ ನಡೆಯುತ್ತೆ ಎಂದಿದ್ದಾರೆ. ವೈದ್ಯರ ಈ ಸಲಹೆಗೆ ನೆಟ್ಟಿಗರು ಧನ್ಯವಾದ ಸಲ್ಲಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...