
ಆದರೆ ವೈದ್ಯ ಡೇನಿಲ್ ಎಂಬ ಹೈಫರ್ ಮ್ಯಾನ್ ಎಂಬವರು ಈ ಕನ್ನಡಕದ ಸಮಸ್ಯೆಗೆ ಪರಿಹಾರ ಕಂಡುಹಿಡಿದಿದ್ದಾರೆ. ಮೂಗಿಗೆ ಒಂದು ಬ್ಯಾಂಡೇಡ್ ಹಾಕೋದ್ರಿಂದ ಈ ಸಮಸ್ಯೆಗೆ ಪರಿಹಾರ ಸಿಗುತ್ತೆ ಎಂದಿದ್ದಾರೆ.
ನೀವು ಕೂಡ ನನ್ನಂತೆ ಕನ್ನಡಕಧಾರಿಯಾಗಿದ್ದು ಮಾಸ್ಕ್ ಧರಿಸೋಕೆ ಕಷ್ಟ ಪಡುತ್ತಿದ್ದರೆ ನನ್ನಲ್ಲಿ ಇದಕ್ಕೆ ಪರಿಹಾರ ಇದೆ. ಇದಕ್ಕಾಗಿ ನೀವು ಹೆಚ್ಚೇನು ಮಾಡಬೇಕಿಲ್ಲ. ನಿಮ್ಮ ಮೂಗಿಗೆ ಒಂದು ಬ್ಯಾಂಡೇಡ್ ಹಾಕಿಬಿಡಿ. ಇದರಿಂದ ನಿಮ್ಮ ಮೂಗಿಗೆ ಕಿರಿಕಿರಿ ಎನಿಸುತ್ತೆ ಎಂದರೆ ನೀವು ಮಾಸ್ಕ್ ಹಾಗೂ ಮೂಗಿನ ಮಧ್ಯ ಹತ್ತಿಯನ್ನಿಟ್ಟು ಬಳಿಕ ಬ್ಯಾಂಡೆಡ್ ಹಾಕಿದ್ರೂ ನಡೆಯುತ್ತೆ ಎಂದಿದ್ದಾರೆ. ವೈದ್ಯರ ಈ ಸಲಹೆಗೆ ನೆಟ್ಟಿಗರು ಧನ್ಯವಾದ ಸಲ್ಲಿಸಿದ್ದಾರೆ.