ಚೆನ್ನೈ: ಜನಸೇವೆಯ ಇಚ್ಛೆಯಿದ್ದರೆ ಅದಕ್ಕೆ ಕೋಟಿ, ಕೋಟಿ ಹಣ ಬೇಕಿಲ್ಲ, ಅಧಿಕಾರ, ಹುದ್ದೆ ಬೇಕಿಲ್ಲ ಎಂಬುದಕ್ಕೆ ಈತನೇ ಸಾಕ್ಷಿ. ಆತನಿಗೇ ಇರಲು ಮನೆಯಿಲ್ಲ. ಆದರೂ ಸುತ್ತಲಿನ ವಿದ್ಯಾರ್ಥಿಗಳಿಗೆ ನೆರವಾಗುತ್ತಿದ್ದಾರೆ. ಚೆನ್ನೈನ ಯುವಕನ ಕಥೆ ಎಂಥವರಿಗೂ ಸ್ಪೂರ್ತಿಯಾಗುತ್ತದೆ. ಸ್ವಯಂಘೋಷಿತ ಜನಸೇವಕರು ನಾಚುವಂತಿದೆ.
ಸೋಲೋಮನ್ ಎಂಬ 22 ವರ್ಷದ ಯುವಕನಿಗೆ ಮನೆಯ ಕಷ್ಟದಿಂದ ಕಾಲೇಜ್‌ಗೆ ತೆರಳಲು ಸಾಧ್ಯವಾಗಿಲ್ಲ. ಬಿಎ ಇಕನಾಮಿಕ್ಸ್ ಓದನ್ನು ಮೊದಲ ವರ್ಷಕ್ಕೇ ನಿಲ್ಲಿಸಿ ಕೆಲಸ ಮಾಡುತ್ತಿದ್ದಾನೆ. ತಂದೆ ಹಮಾಲಿ ಕೆಲಸ ಮಾಡಿದರೆ, ತಾಯಿ ಮನೆಗಳಿಗೆ ತೆರಳಿ ಬಟ್ಟೆ, ಪಾತ್ರೆ ತೊಳೆಯುತ್ತಾಳೆ. ಕುಟುಂಬಕ್ಕೆ ಇರಲು ಸ್ವಂತ ಮನೆ ಸಹ ಇಲ್ಲ. ಬೀದಿಬದಿ ಸಣ್ಣ ಗುಡಿಸಲೇ ಆಶ್ರಯವಾಗಿದೆ.
ಟ್ರೆಡ್ಮಿಲ್ನಿಂದ ಈತ ಬಿದ್ದ ರೀತಿ ನೋಡಿದ್ರೆ ನೀವು ಬಿದ್ದು ಬಿದ್ದು ನಗೋದು ಗ್ಯಾರಂಟಿ….!
ಸೋಲೊಮನ್ ಕಳೆದ ಮೂರು ತಿಂಗಳಿಂದ ತನ್ನ ಸುತ್ತಲಿನ ಬೀದಿಬದಿ ಮಕ್ಕಳಿಗೆ ಪಾಠ ಮಾಡುತ್ತಿದ್ದಾನೆ. ಕೆಲ ಮಕ್ಕಳಿಗೆ ಗಣಿತ, ಇನ್ನು ಕೆಲವರಿಗೆ ವಿಜ್ಞಾನ ಹೀಗೆ ಬೇರೆ ಬೇರೆ ವಿಷಯಗಳ ಬಗ್ಗೆ ಹೇಳಿಕೊಡುತ್ತಿದ್ದಾನೆ.
“ಲಾಕ್‌ಡೌನ್ ನಂತರ ಉಳ್ಳವರ ಮಕ್ಕಳು ಆನ್‌ಲೈನ್ ತರಗತಿ ಪ್ರಾರಂಭಿಸಿದರು. ಆದರೆ, ಬಡ ಮಕ್ಕಳಿಗೆ ಮೊಬೈಲ್ ಎಲ್ಲಿಂದ ಬರಬೇಕು. ಇದರಿಂದ ಶಿಕ್ಷಣವಿಲ್ಲದೇ ಅಲ್ಲಿ ಇಲ್ಲಿ ತಿರುಗುತ್ತಿದ್ದರು. ಅವರ ಸಲುವಾಗಿ ರಾತ್ರಿಯ ಹೊತ್ತು ಬೀದಿ ಬೆಳಕಿನಲ್ಲಿ ಕೆಲ ಹೊತ್ತು ಪಾಠ ಆರಂಭಿಸಿದೆ. ಈಗ ನಾನು ಒಂದು ದಿನ ಬಂದಿಲ್ಲ ಎಂದರೆ ಮಕ್ಕಳೇ ಫೋನ್ ಮಾಡಿ ಕರೆಯುತ್ತಾರೆ” ಎನ್ನುತ್ತಾನೆ ಸೋಲೋಮನ್.