ಮೊಸಳೆ ದಾಳಿಯಿಂದಾಗಿ 15 ವರ್ಷದ ಬಾಲಕಿ ಸಾವನ್ನಪ್ಪಿದ ಘಟನೆ ಗುಜರಾತ್ನ ಗಿರ್ ವನ್ಯ ಜೀವಿ ವಿಭಾಗದ ಸೋಮನಾಥ್ ಜಿಲ್ಲೆಯಲ್ಲಿ ನಡೆದಿದೆ.
ಬಾಬ್ಲು ವಾಘ ಎಂಬವರ ಪುತ್ರಿ ಹಿರಲ್ ವಾಘ್ ನದಿ ತೀರದಲ್ಲಿ ಪಾತ್ರೆ ತೊಳೆಯುತ್ತಿದ್ದ ಸಂದರ್ಭದಲ್ಲಿ ಮೊಸಳೆ ಅಟ್ಯಾಕ್ ಮಾಡಿದೆ. ನೀರಿನ ಆಳಕ್ಕೆ ಆಕೆಯನ್ನ ಕರೆದೊಯ್ದ ಮೊಸಳೆ ತಿಂದು ಹಾಕಿದೆ ಅಂತಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ದುಶ್ಯಂತ್ ವಾಸವಾಡ ಹೇಳಿದ್ದಾರೆ.
ಗಿರ್ ಕಾಡಿನಲ್ಲಿರುವ ಮಾಲ್ದಾರಿಗಳ ವಸಾಹತುಗಳಲ್ಲಿ ಪೊಪಾಪ್ಡಿ ಕೂಡ ಒಂದು. ಮಾಲ್ದಾರಿಗಳು ಸಾಂಪ್ರದಾಯಿಕ ಅರಣ್ಯವಾಸಿಗಳಾಗಿದ್ದು ದನ ಸಾಕಾಣಿಕೆ ಮಾಡುವ ಮೂಲಕ ಜೀವನ ನಡೆಸುತ್ತಾರೆ.