ಉತ್ತರ ಪ್ರದೇಶ ಘಾಜಿಯಾಬಾದ್ ಜಿಲ್ಲೆಯ ಮನೆಯೊಂದರಲ್ಲಿ ತನ್ನ ಮಾಜಿ ಗೆಳೆಯನನ್ನ ಪಾರ್ಟಿಗೆ ಆಹ್ವಾನಿಸಿದ ಗೆಳತಿ ಆತನನ್ನ ಕೊಲೆ ಮಾಡಿದ್ದಾಳೆ ಎನ್ನಲಾಗಿದೆ.
ಮೃತ ಯುವಕನನ್ನ ಎರಡನೇ ವರ್ಷದ ಬಿಕಾಂ ವಿದ್ಯಾರ್ಥಿ 22 ವರ್ಷದ ನಿತಿನ್ ಚೌಧರಿ ಎಂದು ಗುರುತಿಸಲಾಗಿದೆ. ಈತನ ಶವವನ್ನ ಪೊಲೀಸರು ಬುಧವಾರ ವಶಪಡಿಸಿಕೊಂಡಿದ್ದಾರೆ.
ನಿತಿನ್ ಚೌಧರಿಯ ಮಾಜಿ ಗೆಳತಿ ಬೇರೊಬ್ಬನ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರೂ ಸಹ ಆಕೆಯನ್ನ ಮದುವೆಯಾಗುವಂತೆ ಮೃತ ನಿತಿನ್ ಚೌಧರಿ ಪೀಡಿಸುತ್ತಿದ್ದ ಎನ್ನಲಾಗಿದೆ.
ಹೀಗಾಗಿ ತನ್ನ ಭಾವಿ ಪತಿಯ ಜೊತೆ ಈ ವಿಚಾರವನ್ನ ಶೇರ್ ಮಾಡಿದ ಯುವತಿ ಮರ್ಡರ್ಗೆ ಪ್ಲಾನ್ ಮಾಡಿದ್ದಾಳೆ.
ಪ್ಲಾನ್ ಪ್ರಕಾರ ಯುವತಿ ಹಾಗೂ ಆಕೆಯ ಭಾವಿ ಪತಿ ಸನ್ನಿ ನಿತಿನ್ನ್ನು ಪಾರ್ಟಿಯೊಂದಕ್ಕೆ ಆಹ್ವಾನಿಸಿದ್ದಾರೆ. ಆತನಿಗೆ ಬಲವಂತವಾಗಿ ಮದ್ಯಪಾನ ಮಾಡಿಸಿ ಬಳಿಕ ಆತನನ್ನ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.
ಹೆತ್ತ ಮಗಳನ್ನೇ ಗರ್ಭಿಣಿ ಮಾಡಿದ ಪಾಪಿ ತಂದೆ ಅಂದರ್....!
ಪ್ರಕರಣ ಸಂಬಂಧ 56 ವರ್ಷದ ಆರೋಪಿ ವಿನೋದ್ ಕುಮಾರ್ ಎಂಬಾತನನ್ನ ಪೊಲೀಸರು ಬಂಧಿಸಿದ್ದಾರೆ. ಆದರೆ ಆರೋಪಿ ಮಹಿಳೆ ಹಾಗೂ ಆತನ ಭಾವಿ ಪತಿ ನಾಪತ್ತೆಯಾಗಿದ್ದು ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.