alex Certify ಹುಡುಗಿ ಜೊತೆಗಿದ್ದ ವಿದ್ಯಾರ್ಥಿ ಬಟ್ಟೆ ಬಿಚ್ಚಿಸಿದ ಕಿರಾತಕರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹುಡುಗಿ ಜೊತೆಗಿದ್ದ ವಿದ್ಯಾರ್ಥಿ ಬಟ್ಟೆ ಬಿಚ್ಚಿಸಿದ ಕಿರಾತಕರು

ಹುಡುಗಿಯೊಂದಿಗೆ ಇದ್ದ 12 ನೇ ತರಗತಿ ವಿದ್ಯಾರ್ಥಿಗೆ 10ನೇ ತರಗತಿ ವಿದ್ಯಾರ್ಥಿಗಳು ಥಳಿಸಿರುವ ಕ್ರೂರ ಘಟನೆಯು ಉತ್ತರಪ್ರದೇಶದ ಗಾಜಿಯಾಬಾದ್ ನಲ್ಲಿ ನಡೆದಿದೆ.

ತನ್ನದೇ ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿನಿಯನ್ನು ಭೇಟಿ ಮಾಡಲು ಇಚ್ಛಿಸಿದ 12ನೇ ತರಗತಿ ವಿದ್ಯಾರ್ಥಿ, ತಾನಿದ್ದ ಕಾರಿನ ಬಳಿಗೇ ಆಕೆಯನ್ನು ಕರೆಯಿಸಿಕೊಳ್ಳುತ್ತಾನೆ. ಆತನ ಇಬ್ಬರು ಸ್ನೇಹಿತರೂ ಜೊತೆಗಿದ್ದರು.

ಹುಡುಗ-ಹುಡುಗಿ ಇಬ್ಬರೂ ಕಾರಿನಿಂದ ಕೆಳಗಿಳಿದು ಮಾತನಾಡುತ್ತಾ ನಿಂತಿದ್ದರು. ಇದೇ ವೇಳೆಗೆ ಅಲ್ಲಿಗೆ ಬಂದ ಅದೇ ಶಾಲೆಯ 10 ನೇ ತರಗತಿ ವಿದ್ಯಾರ್ಥಿಗಳ ಗುಂಪು, ಎಲ್ಲರನ್ನೂ ಕಾರು ಹತ್ತಿಸಿಕೊಂಡು ಗೋವಿಂದಪುರಂ ಅರಣ್ಯ ಪ್ರದೇಶಕ್ಕೆ ಕೊಂಡೊಯ್ದಿದೆ.

ಅಲ್ಲಿ ವಿದ್ಯಾರ್ಥಿ ಬಟ್ಟೆ ಬಿಚ್ಚಿಸಿ, ಮೈಮೇಲೆ ಬಾಸುಂಡೆ ಮೂಡುವಂತೆ ಥಳಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.

ಆರೋಪಿಗಳು ವಿದ್ಯಾರ್ಥಿ ಹಾಗೂ ಆತನ ಸ್ನೇಹಿತರ ಮೊಬೈಲ್ ಫೋನ್ ಗಳನ್ನು ಕಸಿದು ಅದರಲ್ಲಿದ್ದ ಎಲ್ಲ ಸಮಾಜಿಕ ಜಾಲತಾಣಗಳನ್ನೂ ನಿಷ್ಕ್ರಿಯಗೊಳಿಸಿ ಈ ಕೃತ್ಯ ಎಸಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...