alex Certify 61 ದಿನಗಳಲ್ಲಿ ನೇಪಾಳದಿಂದ ಪಶ್ಚಿಮ ಬಂಗಾಳಕ್ಕೆ ಸಂಚರಿಸಿದ ಮೊಸಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

61 ದಿನಗಳಲ್ಲಿ ನೇಪಾಳದಿಂದ ಪಶ್ಚಿಮ ಬಂಗಾಳಕ್ಕೆ ಸಂಚರಿಸಿದ ಮೊಸಳೆ

ನೇಪಾಳದಲ್ಲಿ ಬಿಡುಗಡೆಯಾದ ಮೊಸಳೆಯೊಂದು 61 ದಿನದಲ್ಲಿ ಸಾವಿರದ ನೂರು ಕಿಲೋಮೀಟರ್ ಪ್ರಯಾಣಿಸಿ ಪಶ್ಚಿಮಬಂಗಾಳದ ಹೂಗ್ಲಿಯನ್ನು ತಲುಪಿ, ಅಲ್ಲಿನ‌ ಮೀನುಗಾರರ ಬಲೆಯಲ್ಲಿ ಸಿಲುಕಿದೆ.

ಗಂಡಕ್ ನದಿಯಲ್ಲಿನ ಮೊಸಳೆ ಪುನರುಜ್ಜೀವನ ಯೋಜನೆಯಲ್ಲಿ ಕೆಲಸ ಮಾಡುತ್ತಿರುವ ಜೀವಶಾಸ್ತ್ರಜ್ಞರು ಈ ವಿಚಾರವನ್ನು ಫೋಟೋ ಸಹಿತ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ನೇಪಾಳದಲ್ಲಿ ಗಂಡಕ್ ನದಿಯನ್ನು ನಾರಾಯಣಿ ಎಂದು ಕರೆಯಲಾಗುತ್ತದೆ. ಅಲ್ಲಿಂದ ಮೊಸಳೆಯು ನಾರಾಯಣಿ ಮೂಲಕ ಗಂಡಕ್, ಗಂಗಾ, ಫಾರಕ್ಕ ಬಳಿಕ ಹೂಗ್ಲಿ ನದಿ ತಲುಪಿದೆ ಎಂದು ಅವರು ಹೇಳಿದ್ದಾರೆ.

ನೀವೆಲ್ಲರೂ ಲಾಕ್ಡೌನ್ ನಲ್ಲಿ ಬಂಧಿ ಆಗಿರಬಹುದು ಆದರೆ ಈಗ ಘರಿಯಲ್ ನೇಪಾಳದಿಂದ 1100ಕಿಲೋಮೀಟರ್ ಪ್ರಯಾಣಿಸಿದೆ ಎಂದು ವೈಪ್ಡ್ ಲೈಫ್ ಟ್ರಸ್ಟ್ ಆಫ್ ಇಂಡಿಯಾ ಟ್ವೀಟ್ ಮಾಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...