alex Certify ಡೂಡಲ್​ ಮೂಲಕ ಲಸಿಕೆ ಹಾಕಿಸಿಕೊಳ್ಳುವಂತೆ ಜಾಗೃತಿ ಮೂಡಿಸಿದ ಗೂಗಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡೂಡಲ್​ ಮೂಲಕ ಲಸಿಕೆ ಹಾಕಿಸಿಕೊಳ್ಳುವಂತೆ ಜಾಗೃತಿ ಮೂಡಿಸಿದ ಗೂಗಲ್

ಸರ್ಕಾರಗಳ ಸಾಕಷ್ಟು ಪ್ರಯತ್ನದ ಬಳಿಕವೂ ಕೋವಿಡ್​ 19 ತಹಬದಿಗೆ ಬರುವ ಹಾಗೆ ಕಾಣುತ್ತಿಲ್ಲ. ಪ್ರತಿದಿನವೂ ಕೊರೊನಾ ಒಬ್ಬೊಬ್ಬರನ್ನೇ ಸೋಂಕಿಗೆ ಆಹುತಿ ಮಾಡ್ತಿದೆ. ಇದರಿಂದಾಗಿ ದೇಶದಲ್ಲಿ ಕಠಿಣ ಸ್ಥಿತಿ ನಿರ್ಮಾಣವಾಗಿದೆ. ಕೊರೊನಾ ಮಾರ್ಗಸೂಚಿಗಳನ್ನ ಪಾಲಿಸದ ಹೊರತು ಈ ಸ್ಥಿತಿಯಿಂದ ಹೊರಬರೋದು ತುಂಬಾನೇ ಕಷ್ಟವಿದೆ ಎಂದು ಸಾಕಷ್ಟು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇಂದಿನಿಂದ ದೇಶದಲ್ಲಿ ಕೊರೊನಾ ಲಸಿಕೆಯ ಮೂರನೇ ಹಂತ ಆರಂಭವಾಗಿದೆ. ಈ ಸಂಬಂಧ ಗೂಗಲ್​ ಹೊಸ ಡೂಡಲ್​ನೊಂದಿಗೆ ಇಂದು ನೆಟ್ಟಿಗರ ಎದುರು ಕಾಣಿಸಿಕೊಂಡಿದೆ. ಕೇವಲ ನಿಮಗಾಗಿ ಮಾತ್ರವಲ್ಲದೇ ಇನ್ನೊಬ್ಬರನ್ನ ಬಚಾವ್​ ಮಾಡಲಿಕ್ಕಾಗಿಯಾದರೂ ಕೊರೊನಾ ಲಸಿಕೆ ತೆಗೆದುಕೊಳ್ಳಿ ಎಂದು ಗೂಗಲ್​ ಈ ಮೂಲಕ ಮನವಿ ಮಾಡಿದೆ.

ಡೂಡಲ್​​ನಲ್ಲಿ ಪ್ರತಿಯೊಂದು ಅಕ್ಷರಕ್ಕೂ ಮಾಸ್ಕ್​ ಹಾಕಲಾಗಿದೆ. e ಅಕ್ಷರವು ಆರೋಗ್ಯ ಸಿಬ್ಬಂದಿಯನ್ನ ಪ್ರತಿನಿಧಿಸುತ್ತಿದೆ. ನೀವು ಡೂಡಲ್​ ಮೇಲೆ ಕ್ಲಿಕ್​ ಮಾಡುತ್ತಿದ್ದಂತೆಯೇ ಒಂದೊಂದು ಅಕ್ಷರವು ಲಸಿಕೆಯನ್ನ ಪಡೆದು ಬಳಿಕ ಸಂಭ್ರಮಿಸುವಂತೆ ಗೋಚರವಾಗುತ್ತದೆ. ಲಸಿಕೆ ಹಾಕಿಸಿಕೊಳ್ಳಿ. ಮಾಸ್ಕ್​ ಧರಿಸಿ ಹಾಗೂ ಜೀವಗಳನ್ನ ಕಾಪಾಡಿ ಎಂಬ ಸಂದೇಶ ನೀಡಲಾಗಿದೆ.

ನೀವು ಈ ಡೂಡಲ್​ ಮೇಲೆ ಕ್ಲಿಕ್ ಮಾಡಿದ್ರೆ ಇದು ನಿಮಗೆ ನೇರವಾಗಿ ಕೋವಿಡ್​ ಲಸಿಕೆ ಸಂಬಂಧಿ ಮಾಹಿತಿಯನ್ನ ನೀಡಲಿದೆ. ನೀವಿರುವ ಸ್ಥಳವನ್ನ ಅವಲಂಭಿಸಿ ನಿಮಗೆ ಲಸಿಕೆ ಕುರಿತು ಅಗತ್ಯ ಮಾಹಿತಿಯನ್ನ ನೀಡಲಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...