ಸರ್ಕಾರಗಳ ಸಾಕಷ್ಟು ಪ್ರಯತ್ನದ ಬಳಿಕವೂ ಕೋವಿಡ್ 19 ತಹಬದಿಗೆ ಬರುವ ಹಾಗೆ ಕಾಣುತ್ತಿಲ್ಲ. ಪ್ರತಿದಿನವೂ ಕೊರೊನಾ ಒಬ್ಬೊಬ್ಬರನ್ನೇ ಸೋಂಕಿಗೆ ಆಹುತಿ ಮಾಡ್ತಿದೆ. ಇದರಿಂದಾಗಿ ದೇಶದಲ್ಲಿ ಕಠಿಣ ಸ್ಥಿತಿ ನಿರ್ಮಾಣವಾಗಿದೆ. ಕೊರೊನಾ ಮಾರ್ಗಸೂಚಿಗಳನ್ನ ಪಾಲಿಸದ ಹೊರತು ಈ ಸ್ಥಿತಿಯಿಂದ ಹೊರಬರೋದು ತುಂಬಾನೇ ಕಷ್ಟವಿದೆ ಎಂದು ಸಾಕಷ್ಟು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಇಂದಿನಿಂದ ದೇಶದಲ್ಲಿ ಕೊರೊನಾ ಲಸಿಕೆಯ ಮೂರನೇ ಹಂತ ಆರಂಭವಾಗಿದೆ. ಈ ಸಂಬಂಧ ಗೂಗಲ್ ಹೊಸ ಡೂಡಲ್ನೊಂದಿಗೆ ಇಂದು ನೆಟ್ಟಿಗರ ಎದುರು ಕಾಣಿಸಿಕೊಂಡಿದೆ. ಕೇವಲ ನಿಮಗಾಗಿ ಮಾತ್ರವಲ್ಲದೇ ಇನ್ನೊಬ್ಬರನ್ನ ಬಚಾವ್ ಮಾಡಲಿಕ್ಕಾಗಿಯಾದರೂ ಕೊರೊನಾ ಲಸಿಕೆ ತೆಗೆದುಕೊಳ್ಳಿ ಎಂದು ಗೂಗಲ್ ಈ ಮೂಲಕ ಮನವಿ ಮಾಡಿದೆ.
ಡೂಡಲ್ನಲ್ಲಿ ಪ್ರತಿಯೊಂದು ಅಕ್ಷರಕ್ಕೂ ಮಾಸ್ಕ್ ಹಾಕಲಾಗಿದೆ. e ಅಕ್ಷರವು ಆರೋಗ್ಯ ಸಿಬ್ಬಂದಿಯನ್ನ ಪ್ರತಿನಿಧಿಸುತ್ತಿದೆ. ನೀವು ಡೂಡಲ್ ಮೇಲೆ ಕ್ಲಿಕ್ ಮಾಡುತ್ತಿದ್ದಂತೆಯೇ ಒಂದೊಂದು ಅಕ್ಷರವು ಲಸಿಕೆಯನ್ನ ಪಡೆದು ಬಳಿಕ ಸಂಭ್ರಮಿಸುವಂತೆ ಗೋಚರವಾಗುತ್ತದೆ. ಲಸಿಕೆ ಹಾಕಿಸಿಕೊಳ್ಳಿ. ಮಾಸ್ಕ್ ಧರಿಸಿ ಹಾಗೂ ಜೀವಗಳನ್ನ ಕಾಪಾಡಿ ಎಂಬ ಸಂದೇಶ ನೀಡಲಾಗಿದೆ.
ನೀವು ಈ ಡೂಡಲ್ ಮೇಲೆ ಕ್ಲಿಕ್ ಮಾಡಿದ್ರೆ ಇದು ನಿಮಗೆ ನೇರವಾಗಿ ಕೋವಿಡ್ ಲಸಿಕೆ ಸಂಬಂಧಿ ಮಾಹಿತಿಯನ್ನ ನೀಡಲಿದೆ. ನೀವಿರುವ ಸ್ಥಳವನ್ನ ಅವಲಂಭಿಸಿ ನಿಮಗೆ ಲಸಿಕೆ ಕುರಿತು ಅಗತ್ಯ ಮಾಹಿತಿಯನ್ನ ನೀಡಲಾಗುತ್ತದೆ.