alex Certify ಗೇಟ್​ ವೇ ಆಫ್​ ಇಂಡಿಯಾದಲ್ಲಿ ತೌಕ್ತೆ ಅಬ್ಬರ…! ವೈರಲ್​ ಆಯ್ತು ಬೆಚ್ಚಿಬೀಳಿಸುವ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗೇಟ್​ ವೇ ಆಫ್​ ಇಂಡಿಯಾದಲ್ಲಿ ತೌಕ್ತೆ ಅಬ್ಬರ…! ವೈರಲ್​ ಆಯ್ತು ಬೆಚ್ಚಿಬೀಳಿಸುವ ವಿಡಿಯೋ

ಅರಬ್ಬಿ ಸಮುದ್ರದ ಪ್ರಚಂಡ ಅಲೆಗಳು ಮುಂಬೈನ ಗೇಟ್​ ವೇ ಇಂಡಿಯಾದ ಗೋಡೆಗಳ ಮೇಲೆ ಅಪ್ಪಳಿಸಿದ್ದು ಈ ರಣಭೀಕರ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗ್ತಿದೆ.

ತೌಕ್ತೆ ಚಂಡಮಾರುತದ ಅಬ್ಬರದಿಂದಾಗಿ ಗುಜರಾತ್​ನ ಹಲವೆಡೆ ಭೂಕುಸಿತ ಉಂಟಾಗಿದೆ. ಭೀಕರ ಚಂಡಮಾರುತದ ವಿಭಾಗಕ್ಕೆ ಸೇರಿರುವ ತೌಕ್ತೆ ಮಹಾರಾಷ್ಟ್ರ ಮಾರ್ಗವಾಗಿ ಗುಜರಾತ್​ಗೆ ಹೋಗಿದೆ. ಮಹಾರಾಷ್ಟ್ರದಲ್ಲಿ ತೌಕ್ತೆ ಚಂಡಮಾರುತದ ಅಬ್ಬರಕ್ಕೆ ಕಡಿಮೆ ಅಂದರೂ 6 ಮಂದಿ ಸಾವನ್ನಪ್ಪಿದ್ದಾರೆ.

ಕೋವಿಡ್ 19 ಆರ್ಭಟದಿಂದ ಕೊಂಚ ಸುಧಾರಿಸುತ್ತಿದ್ದ ಮಹಾರಾಷ್ಟ್ರಕ್ಕೆ ಇದೀಗ ತೌಕ್ತೆ ಕೂಡ ಸಾಕಷ್ಟು ಹಾನಿಯನ್ನ ತಂದೊಡ್ಡಿದೆ. ಗೇಟ್​ ವೇ ಇಂಡಿಯಾಗೆ ಅಪ್ಪಳಿಸುತ್ತಿರುವ ಅಲೆಗಳ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗ್ತಿದೆ. ಟ್ವಿಟರ್ ಸೇರಿದಂತೆ ಸಾಮಾಜಿಕ ಜಾಲತಾಣದ ವಿವಿಧ ವೇದಿಕೆಗಳಲ್ಲಿ ಗೇಟ್​ ವೇ ಆಫ್​ ಇಂಡಿಯಾದ ವಿಡಿಯೋಗಳು ಶೇರ್​ ಆಗಿದ್ದು ನೆಟ್ಟಿಗರು ಶಾಕ್​ಗೊಳಗಾಗಿದ್ದಾರೆ.

— Sameer (@BesuraTaansane) May 17, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...