
ತೌಕ್ತೆ ಚಂಡಮಾರುತದ ಅಬ್ಬರದಿಂದಾಗಿ ಗುಜರಾತ್ನ ಹಲವೆಡೆ ಭೂಕುಸಿತ ಉಂಟಾಗಿದೆ. ಭೀಕರ ಚಂಡಮಾರುತದ ವಿಭಾಗಕ್ಕೆ ಸೇರಿರುವ ತೌಕ್ತೆ ಮಹಾರಾಷ್ಟ್ರ ಮಾರ್ಗವಾಗಿ ಗುಜರಾತ್ಗೆ ಹೋಗಿದೆ. ಮಹಾರಾಷ್ಟ್ರದಲ್ಲಿ ತೌಕ್ತೆ ಚಂಡಮಾರುತದ ಅಬ್ಬರಕ್ಕೆ ಕಡಿಮೆ ಅಂದರೂ 6 ಮಂದಿ ಸಾವನ್ನಪ್ಪಿದ್ದಾರೆ.
ಕೋವಿಡ್ 19 ಆರ್ಭಟದಿಂದ ಕೊಂಚ ಸುಧಾರಿಸುತ್ತಿದ್ದ ಮಹಾರಾಷ್ಟ್ರಕ್ಕೆ ಇದೀಗ ತೌಕ್ತೆ ಕೂಡ ಸಾಕಷ್ಟು ಹಾನಿಯನ್ನ ತಂದೊಡ್ಡಿದೆ. ಗೇಟ್ ವೇ ಇಂಡಿಯಾಗೆ ಅಪ್ಪಳಿಸುತ್ತಿರುವ ಅಲೆಗಳ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಟ್ವಿಟರ್ ಸೇರಿದಂತೆ ಸಾಮಾಜಿಕ ಜಾಲತಾಣದ ವಿವಿಧ ವೇದಿಕೆಗಳಲ್ಲಿ ಗೇಟ್ ವೇ ಆಫ್ ಇಂಡಿಯಾದ ವಿಡಿಯೋಗಳು ಶೇರ್ ಆಗಿದ್ದು ನೆಟ್ಟಿಗರು ಶಾಕ್ಗೊಳಗಾಗಿದ್ದಾರೆ.
https://twitter.com/i/status/1394340338907508737