alex Certify ಹರಾಜಿಗಿದೆ ಮಹಾತ್ಮ ಗಾಂಧಿ ಬಳಸಿದ ಪಾತ್ರೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹರಾಜಿಗಿದೆ ಮಹಾತ್ಮ ಗಾಂಧಿ ಬಳಸಿದ ಪಾತ್ರೆ….!

Gandhiji's Bowl, Fork and Spoons to be Auctioned in UK, Expected to Fetch Close to Rs 55 Lakh

ಪುಣೆಯ ಆಘಾಖಾನ್ ಅರಮನೆ ಹಾಗೂ ಮುಂಬಯಿಯ ಪಾಮ್ ಬನ್ ಹೌಸ್‌ನಲ್ಲಿ 1942-1944ರ ನಡುವಿನ ಅವಧಿಯಲ್ಲಿ ಕಾಲ ಕಳೆದಿದ್ದ ವೇಳೆ ಮಹಾತ್ಮಾ ಗಾಂಧಿಯವರು ಬಳಸಿದ್ದ ಪಾತ್ರೆ ಹಾಗೂ ಇತರೆ ಸಾಮಾನುಗಳನ್ನು ಬ್ರಿಟನ್‌ನ ಬ್ರಿಸ್ಟಾಲ್‌ನಲ್ಲಿ ಹರಾಜಿಗೆ ಇಡಲಾಗಿದೆ.

ಜನವರಿ 10ರಂದು ನಡೆಯಲಿರುವ ಈ ಹರಾಜಿನಲ್ಲಿ ಹರಾಜಿಗೆ ಒಳಗಾಗಲಿರುವ ಪಾತ್ರೆಗಳ ಆರಂಭಿಕ ಬೆಲೆ 55 ಸಾವಿರ ಪೌಂಡ್‌ಗಳಷ್ಟು ಇದ್ದು, ಇದು 54,57,810 ರೂ.ಗಳಷ್ಟಾಗುತ್ತದೆ. ಈ ಆಂಟಿಕ್ ಪದಾರ್ಥಗಳನ್ನು ಭಾರತಕ್ಕೆ ತರುವ ಯೋಜನೆ ಇದ್ದಲ್ಲಿ, ಜಿಎಸ್‌ಟಿ, ವಿಮೆ, ಆಮದು ಸುಂಕ, ಸಾಗಾಟದ ವೆಚ್ಚ ಸೇರಿ ಏನಿಲ್ಲವೆಂದರೂ 1.2 ಕೋಟಿ ರೂ.ಗಳಷ್ಟು ಖರ್ಚಾಗಲಿದೆ.

ಈ ಪಾತ್ರೆಗಳ ಪೈಕಿ ಸಣ್ಣದೊಂದು ಲೋಹದ ಬಟ್ಟಲು, ಎರಡು ಮರದ ಚಮಚಗಳು ಮತ್ತು ಫೋರ್ಕ್. ಆಘಾಖಾನ್‌ ಅರಮನೆಯಲ್ಲಿ ಇದ್ದ ಗಾಂಧಿ ಇದೇ ವೇಳೆ ಮುಂಬಯಿಯಲ್ಲಿ ತಮ್ಮ ಸ್ನೇಹಿತ ನರೋತ್ತಮ್‌ ಮೊರಾರ್ಜಿ ಅವರ ಪಾಮ್ ಬನ್ ಬಂಗಲೆಯಲ್ಲಿ ಒಂದಷ್ಟು ದಿನ ಕಳೆದಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...