alex Certify ಟ್ರೆಡ್​ಮಿಲ್​ನಿಂದ ಈತ ಬಿದ್ದ ರೀತಿ ನೋಡಿದ್ರೆ ನೀವು ಬಿದ್ದು ಬಿದ್ದು ನಗೋದು ಗ್ಯಾರಂಟಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟ್ರೆಡ್​ಮಿಲ್​ನಿಂದ ಈತ ಬಿದ್ದ ರೀತಿ ನೋಡಿದ್ರೆ ನೀವು ಬಿದ್ದು ಬಿದ್ದು ನಗೋದು ಗ್ಯಾರಂಟಿ….!

ದೇಹದಂಡನೆ ಮಾಡಬೇಕು ಅಂತಾ ಜಿಮ್​​ಗೆ ಹೋಗುವ ಪ್ರತಿಯೊಬ್ಬರಿಗೂ ಟ್ರೆಡ್​ಮಿಲ್​ ಮೇಲೆ ಜಾಗಿಂಗ್​ ಮಾಡೋಕೆ ಗೊತ್ತಿರುತ್ತೆ, ಈ ಟ್ರೆಡ್​​ಮಿಲ್​ನ್ನು ಹತ್ತುವಾಗ ಹಾಗೂ ಇಳಿಯುವಾಗ ಸರಿಯಾದ ಕ್ರಮವನ್ನ ಅನುಸರಿಸಬೇಕಾಗುತ್ತೆ. ಆದರೆ ಇಲ್ಲೊಬ್ಬ ಭೂಪ ಓಡುತ್ತಿರುವ ಟ್ರೆಡ್​ ಮಿಲ್​​ ಮೇಲೆ ಕಾಲಿಡೋಕೆ ಹೋಗಿ ಜಾರಿ ಬಿದ್ದಿದ್ದಾನೆ. ಇಷ್ಟು ಮಾತ್ರವಲ್ಲದೇ ಆತನ ಪ್ಯಾಂಟ್​ ಕೂಡ ಕಳಚಿ ಹೋಗಿದ್ದು ಈ ವಿಡಿಯೋ ನೋಡಿದ ನೆಟ್ಟಿಗರು ಬಿದ್ದು ಬಿದ್ದು ನಗುತ್ತಿದ್ದಾರೆ.

ಟ್ರೆಡ್​​ಮಿಲ್​ನ್ನು ಹತ್ತಿದ ಬಳಿಕ ಅದನ್ನ ಆನ್​ ಮಾಡಬೇಕು. ನಿಧಾನವಾಗಿ ವೇಗವನ್ನ ಹೆಚ್ಚಿಸುತ್ತಾ ಬಳಿಕ ಜಾಗಿಂಗ್​ ಇಲ್ಲವೇ ವಾಕಿಂಗ್​ ಮಾಡಬಹುದು. ಆದರೆ ಈ ಪುಣ್ಯಾತ್ಮ ಮಾತ್ರ ಸಿಕ್ಕಾಪಟ್ಟೆ ವೇಗವಾಗಿ ಚಲಿಸುತ್ತಿದ್ದ ಟ್ರೆಡ್​ಮಿಲ್​ನ್ನು ಹತ್ತಿ ಈ ಅವಾಂತರ ಮಾಡಿಕೊಂಡಿದ್ದಾನೆ.

ಅಂದ ಹಾಗೆ ಈತನಿಗೆ ಅಂತಹ ಗಂಭೀರ ಗಾಯವೇನು ಆಗಿಲ್ಲ. ನೋಡೋಕೆ ಈ ವಿಡಿಯೋ ತಮಾಷೆ ಎನಿಸಿದ್ರೂ ಸಹ ಆತನ ಜೀವಕ್ಕೇ ಅಪಾಯವಾಗುವ ಎಲ್ಲಾ ಸಾಧ್ಯತೆಗಳೂ ಇದ್ದವು ಎಂಬ ಮಾತನ್ನೂ ನಾವು ತಳ್ಳಿ ಹಾಕುವಂತಿಲ್ಲ. ಹೀಗಾಗಿ ಯಾರೂ ಸಹ ಇಂತಹ ಹುಚ್ಚಾಟಗಳನ್ನ ತಮಾಷೆಗೂ ಪ್ರದರ್ಶಿಸದಿರಿ.

https://www.instagram.com/p/CKlrtE3D4z_/?utm_source=ig_web_copy_link

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...