alex Certify ಸ್ಕೂಬಾ ಡೈವರ್​​ಗೆ ಸಮುದ್ರ ಜೀವಿಯಿಂದ ಆಲಿಂಗನ….! ಪರಿಶುದ್ಧ ಪ್ರೀತಿಗೆ ಸಾಕ್ಷಿಯಾಯ್ತು ಈ ಅಪರೂಪದ ದೃಶ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ಕೂಬಾ ಡೈವರ್​​ಗೆ ಸಮುದ್ರ ಜೀವಿಯಿಂದ ಆಲಿಂಗನ….! ಪರಿಶುದ್ಧ ಪ್ರೀತಿಗೆ ಸಾಕ್ಷಿಯಾಯ್ತು ಈ ಅಪರೂಪದ ದೃಶ್ಯ

ಕೇವಲ ಮನುಷ್ಯರಿಗಷ್ಟೇ ಅಲ್ಲದೇ ಪ್ರಾಣಿಗಳಿಗೂ ಒಮ್ಮೊಮ್ಮೆ ಆಲಿಂಗನದ ಅವಶ್ಯಕತೆ ಇರುತ್ತೆ. ಸ್ಕೂಬಾ ಡೈವರ್​ಗೆ ಸಮುದ್ರದಾಳದಲ್ಲಿ ಸೀಲ್​ ಆಲಿಂಗನ ಮಾಡಿದ್ದು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ. ಈ ಕ್ಲಿಪ್​ನ್ನು ಐಎಫ್​ಎಸ್​ ಅಧಿಕಾರಿ ಸುಸಾಂತಾ ನಂದಾ ಶೇರ್​ ಮಾಡಿದ್ದಾರೆ.

ಈ ವಿಡಿಯೋದಲ್ಲಿ, ಸೀಲ್​​ ಸ್ಕೈ ಡೈವರ್​ನ್ನು ತಬ್ಬಿಕೊಳ್ಳುತ್ತೆ. ಸ್ಕೈ ಡೈವರ್​ ಕೂಡ ಸೀಲ್​​ನ ಈ ಪ್ರೀತಿಯನ್ನ ಸಖತ್​ ಎಂಜಾಯ್​ ಮಾಡಿದ್ದಾರೆ. ಈ ಮುದ್ದಾದ ವಿಡಿಯೋ ನೋಡೋಕೆ ಎರಡು ಕಣ್ಣು ಸಾಲದು ಎಂಬಂತಿದೆ.

ಆಲಿಂಗನದಲ್ಲಿ ಪ್ರೀತಿ ಅಡಗಿದೆ ಎಂದು ಸುಸಾಂತಾ ನಂದಾ ಈ ವಿಡಿಯೋಗೆ ಶೀರ್ಷಿಕೆ ನೀಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ. ನೆಟ್ಟಿಗರು ಇಷ್ಟೊಂದು ಪರಿಶುದ್ಧ ಪ್ರೀತಿಯನ್ನ ಗಳಿಸಿದ ಸ್ಕೂಬಾ ಡೈವರ್​ ಜಾಗದಲ್ಲಿ ನಾವಿರಬೇಕಿತ್ತು ಅಂತಾ ಕೈ ಕೈ ಹೊಸಕಿಕೊಳ್ತಿದ್ದಾರೆ.
ಅಂದಹಾಗೆ ಈ ವಿಡಿಯೋದ ಬಗ್ಗೆ ನಿಮಗೆ ಏನೆನ್ನಿಸಿತು..?

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...